Home News ಶಿಡ್ಲಘಟ್ಟ ನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕಳ್ಳತನಕ್ಕೆ ಪ್ರಯತ್ನ

ಶಿಡ್ಲಘಟ್ಟ ನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕಳ್ಳತನಕ್ಕೆ ಪ್ರಯತ್ನ

0
Sidlaghatta Union Bank of India Corporation Bank Robbery

ಶಿಡ್ಲಘಟ್ಟ ನಗರದ  ರೇಷ್ಮೆಗೂಡು ಮಾರ್ಕೆಟ್ ಬಳಿ ಇರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಗೆ ಹಿಂಬದಿಯ ಕಿಟಕಿ ಹೊಡೆದು ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಕಳ್ಳರು ಒಳಗೆ ಪ್ರವೇಶಿಸಿ ಬೀರು ಒಡೆದು ದಾಖಲೆಗಳನ್ನು ಚಲ್ಲಾ ಪಿಲ್ಲಿ ಮಾಡಿದ್ದಾರೆ.  ಹಣ ದೋಚಲು ಆಗದೇ ಪರಾರಿಯಾಗಿದ್ದಾರೆ. ದಾಖಲೆಗಳು ಚಲ್ಲಾಪಿಲ್ಲಿಯಾಗಿದ್ದು, ಈ ಬಗ್ಗೆ ವಿವರಗಳು ಇನ್ನೂ ತಿಳಿಯಬೇಕಾಗಿದೆ.

ಘಟನಾ ಸ್ಥಳಕ್ಕೆ ಡಾಗ್ ಸ್ಕ್ವಾಡ್ , ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು.

ಸರ್ಕಲ್ ಇನ್ ಸ್ಪೆಕ್ಟರ್ ಸುರೇಶ್, ಡಿ.ವೈ.ಎಸ್. ಪಿ ವಿ. ಲಕ್ಷ್ಮಯ್ಯ, ಪಿಎಸ್ಐ ಸತೀಶ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version