ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿ ಅಚ್ಚುಕಟ್ಟಿನ ಗ್ಯಾರಡಿ ಕೆರೆ ತುಂಬಿ ಕೋಡಿ ಹರಿದಿದ್ದು ಗ್ರಾಮಸ್ಥರು ತಂಬಿಟ್ಟು ದೀಪ ಬೆಳಗಿ ಬಾಗಿನ ಅರ್ಪಿಸಿದರು.
ಶಿಡ್ಲಘಟ್ಟ-ಚಿಂತಾಮಣಿ ಗಡಿಗೆ ಹೊಂದಿಕೊಂಡ ಈ ಕೆರೆಯು 15 ವರ್ಷಗಳ ನಂತರ ಕೋಡಿ ಹರಿದಿದ್ದು, ಗ್ರಾಮಸ್ಥರು ಸಂತಸದಿಂದಲೆ ಪೂಜೆ ಸಲ್ಲಿಸಿ ತಂಬಿಟ್ಟು ದೀಪ ಬೆಳೆಗಿ ಪುಷ್ಪ ನಮನ ಸಲ್ಲಿಸಿ ಬಾಗಿನ ಅರ್ಪಿಸಿದರು.
ಗ್ರಾಮದಿಂದ ಕೆರೆಯ ಕೋಡಿ ಹರಿವ ಕಟ್ಟೆಯವರೆಗೂ ತಮಟೆ ಮೇಳಗಳೊಂದಿಗೆ, ತಂಬಿಟ್ಟು ದೀಪಗಳನ್ನು ಮಹಿಳೆಯರು ಹೊತ್ತುಕೊಂಡು ಮೆರವಣಿಗೆ ಮೂಲಕ ಸಾಗಿದ ಗ್ರಾಮಸ್ಥರು ಅಲ್ಲಿ ಪೂಜೆ ಸಲ್ಲಿಸಿ ನೈವೇಧ್ಯ ಅರ್ಪಿಸಿ ಪ್ರಸಾದ ಹಂಚಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರದೇವರಾಜ್, ಗ್ರಾಮದ ಎಚ್.ಎಂ.ಕ್ಯಾತಪ್ಪ, ದೇವರಾಜ್, ರವಿ, ಮಾರಪ್ಪ, ಕೆಂಪರೆಡ್ಡಿ, ನಾರಾಯಣಪ್ಪ, ಚಿಕ್ಕಮಾಚರೆಡ್ಡಿ, ಮುನಿಸ್ವಾಮಿರೆಡ್ಡಿ, ಮಂಜುನಾಥ್, ಚಂದ್ರಶೇಕರ್, ಶ್ರೀನಿವಾಸ್, ರಾಜ್‌ಗೋಪಾಲ್ ಹಾಜರಿದ್ದರು.