ತಾಲ್ಲೂಕಿನ ನಡಿಪಿನಾಯಕನಹಳ್ಳಿ ನವೋದಯ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕರಾಟೆ ಸ್ಪರ್ಧೇಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಎಸ್.ಸ್ನೇಹಾ ಹಾಗೂ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ ನಡಿಪಿನಾಯಕನಹಳ್ಳಿ ನವೋದಯ ಶಾಲೆಯ ಅಧ್ಯಕ್ಷ ಕೃಷಮೂರ್ತಿ ಮಾತನಾಡಿದರು.
ಸಾಧಿಸಬೇಕೆನ್ನುವ ಛಲವೊಂದಿದ್ದರೆ ಎಂತಹ ಕಠಿಣವಾದ ಸವಾಲುಗಳನ್ನು ಸಹ ಸುಲಭವಾಗಿ ಜಯಿಸಲಿಕ್ಕೆ ಸಾಧ್ಯವಿದೆ ಎಂದು ಅವರು ಹೇಳಿದರು.
ನಿರಂತರವಾದ ಅಭ್ಯಾಸ, ಅಧ್ಯಯನ, ಹಾಗೂ ಏಕಾಗ್ರತೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಒಮ್ಮೆ ಸೋತವರು ಜೀವನದಲ್ಲಿ ಬಹಳಷ್ಟು ಬಾರಿ ಗೆಲುವು ಸಾಧಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಡಯಟ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನದಲ್ಲಿ ಗಣಿತ ಮಾದರಿ ತಯಾರಿಕೆಯಲ್ಲಿ ಎಸ್.ಆರ್.ಮೌನಿಷ ಮತ್ತು ವೈ.ಬಿ.ಲಿಖಿತ (ಪ್ರಥಮ) ; ಕೈಗಾರಿಕಾ ಅಭಿವೃದ್ಧಿ ವಿಭಾಗದಲ್ಲಿ ಎನ್.ನಿಸರ್ಗ ಮತ್ತು ಎಂ. ರಕ್ಷಾಕೃಷ್ಣನ್ (ಪ್ರಥಮ) ; ಸ್ವಚ್ಚತೆ ಮತ್ತು ಆರೋಗ್ಯ ವಿಭಾಗದಲ್ಲಿ ಎನ್.ಸಿರೀಷ, ಮತ್ತು ಟಿ.ಡಿ.ರಂಜಿತ (ಪ್ರಥಮ) ; ಸುಸ್ಥಿರ ಕೃಷಿ ಪದ್ಧತಿಗಳು ವಿಭಾಗದಲ್ಲಿ ಎ.ಕೆ.ಲಿಖಿತ ಮತ್ತು ಆರ್.ಸೌಮ್ಯ (ದ್ವಿತೀಯ) ; ಭವಿಷ್ಯದಲ್ಲಿ ಸಾರಿಗೆ ಮತ್ತು ಸಂಪರ್ಕ ವಿಭಾಗದಲ್ಲಿ ಎಚ್.ಎಸ್.ಉಜ್ವಲ್‌ಗೌಡ ಮತ್ತು ಆರ್. ನಯನ (ದ್ವಿತೀಯ) ; ಸಂಪನ್ಮೂಲ ನಿರ್ವಹಣೆ ವಿಭಾಗದಲ್ಲಿ ವೈ.ಎಲ್. ನಯನ ಮತ್ತು ವೈ.ಜಿ. ವಿದ್ಯಾ (ತೃತೀಯ) ಸ್ಥಾನ ಪಡೆದಿದ್ದಾರೆ.
ಶಿಕ್ಷಕರಾದ ಸುದರ್ಶನ್, ಜೆ.ವಿ.ಸುಜಾತ, ಸತ್ಯನಾರಾಯಣ, ಉಮಾಶಂಕರ್, ಮನ್ಸೂರ್,ಚೌಡರೆಡ್ಡಿ, ಕರಾಟೆ ಶಿಕ್ಷಕರಾದ ನೂರುಲ್ಲಾ, ಮಹಮದ್ ಇನಾಯತ್, ಅಪ್ರೋಜ್ ಪಾಷ, ದ್ಯಾವಪ್ಪ, ಗಿರೀಶ್, ನಾಗೇಶ್, ಕೃಷ್ಣಮೂರ್ತಿ, ಮುನಿರಾಜು, ಶ್ವೇತಾ, ಶಿಲ್ಪ, ತುಳಸಿ, ಲೀಲಾ, ಪ್ರಶೀಲ, ಕಮಲ, ಮಂಜುಶ್ರೀ, ಪುಷ್ಪಾವತಿ, ರೂಪ, ಆದಿನಾರಾಯಣ, ಶ್ರೀಧರ್‌ಮೂರ್ತಿ, ರಜನಿಕಾಂತ್ ಹಾಜರಿದ್ದರು.
- Advertisement -
- Advertisement -
- Advertisement -







