Sidlaghatta : ಶಿಡ್ಲಘಟ್ಟ ನಗರದ 11ನೇ ವಾರ್ಡಿನಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಕಾರ್ಯವನ್ನು ಶೇ.100ರಷ್ಟು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೂತ್ ಮಟ್ಟದ ಅಧಿಕಾರಿ (ಬಿ.ಎಲ್.ಒ) ಪರಿಮಳ ಅವರನ್ನು ವಾರ್ಡಿನ ಮುಖಂಡರು ಭಾನುವಾರ ಸನ್ಮಾನಿಸಿದರು. ವಾರ್ಡಿನ ಮತದಾರ ಪಟ್ಟಿಯಲ್ಲಿ ಒಟ್ಟು 1,280 ಮತದಾರ ಹೆಸರುಗಳಿದ್ದು, 296 ಹೆಸರುಗಳನ್ನು ಪರಿಷ್ಕರಿಸಿ ಪ್ರಸ್ತುತ 984 ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ.
ಈ ವೇಳೆ ಮಾತನಾಡಿದ ಮಾಜಿ ನಗರಸಭಾ ಸದಸ್ಯ ಎಲ್. ಅನಿಲ್ ಕುಮಾರ್, “ಎಲ್ಲಾ ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ಬಿ.ಎಲ್.ಒ ಪರಿಮಳ ಅವರು ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಸಮರ್ಪಕವಾಗಿ ಪರಿಶೀಲಿಸಿ ಎಸ್.ಐ.ಆರ್ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮತದಾರ ಪಟ್ಟಿಯನ್ನು ನಿಖರಗೊಳಿಸುವಲ್ಲಿ ಅವರ ಕಾರ್ಯ ಶ್ಲಾಘನೀಯವಾಗಿದೆ” ಎಂದು ಹೇಳಿದರು.
ಯಾರೆಲ್ಲಾ ಉಪಸ್ಥಿತರಿದ್ದರು?
ಕಾರ್ಯಕ್ರಮದಲ್ಲಿ ಬಿ.ಎಲ್.ಎ-2ಗಳಾದ ಶಿವಕುಮಾರ್ ಮತ್ತು ಶಂಕರ್, ಹಿರಿಯರಾದ ಅನಂತರಾಮಯ್ಯ, ಕೊಂಡಪ್ಪನವರ ವೇಣು, ಅನಂತ್, ಚಾಂದ್ ಪಾಷ, ಮನ್ಸೂರ್, ಸುರೇಶ್, ನಂಜುಂಡಪ್ಪ, ನಾಗರಾಜ್, ಮುನಿರಾಜು, ವೆಂಕಟೇಶ್ ಸೇರಿದಂತೆ ವಾರ್ಡಿನ ಮುಖಂಡರು ಉಪಸ್ಥಿತರಿದ್ದರು.
ಎಸ್.ಐ.ಆರ್ ಕಾರ್ಯ ಕುರಿತ ಇತರ ಎಸ್.ಐ.ಆರ್ ಮಹಾ ಅಭಿಯಾನ ವರದಿಯನ್ನೂ ಓದಿ.
In English: BLO Parimala, who completed the Special Intensive Revision (SIR) of the electoral roll in Ward 11 of Sidlaghatta city with 100% success, was felicitated by ward leaders on Sunday. Former corporator L. Anil Kumar praised her house-to-house verification work. Of the ward’s 1,280 voter names, 296 were removed on revision, leaving 984 voters on the current list.
FAQ
ಎಸ್.ಐ.ಆರ್ (ವಿಶೇಷ ತೀವ್ರ ಪರಿಷ್ಕರಣೆ) ಕಾರ್ಯ ಎಂದರೇನು?
ಮತದಾರರ ಪಟ್ಟಿಯನ್ನು ನಿಖರಗೊಳಿಸಲು ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ) ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಪರಿಶೀಲಿಸುವ ಪ್ರಕ್ರಿಯೆ. ಶಿಡ್ಲಘಟ್ಟ ನಗರದ 11ನೇ ವಾರ್ಡಿನಲ್ಲಿ ಈ ಕಾರ್ಯ ಶೇ.100ರಷ್ಟು ಪೂರ್ಣಗೊಂಡಿದೆ.
11ನೇ ವಾರ್ಡಿನ ಮತದಾರ ಪಟ್ಟಿಯಲ್ಲಿ ಏನು ಬದಲಾವಣೆಯಾಗಿದೆ?
ಒಟ್ಟು 1,280 ಮತದಾರ ಹೆಸರುಗಳಲ್ಲಿ 296 ಹೆಸರುಗಳು ವಿವಿಧ ಕಾರಣಗಳಿಂದ ಪಟ್ಟಿಯಿಂದ ಹೊರಗುಳಿದಿವೆ. ಪ್ರಸ್ತುತ 984 ಮತದಾರರು ಪಟ್ಟಿಯಲ್ಲಿ ಉಳಿದಿದ್ದಾರೆ.








