Home Obituary ನಿಧನ ವಾರ್ತೆ – ಎಂ.ವೆಂಕಟಮೂರ್ತಿ

ನಿಧನ ವಾರ್ತೆ – ಎಂ.ವೆಂಕಟಮೂರ್ತಿ

0
Bhaktarahalli M Venkatamurthy Demise

ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಹಿರಿಯರು, ಸ್ವಾತಂತ್ರ ಹೋರಾಟಗಾರರ ಕುಟುಂಬದ ಎಂ.ವೆಂಕಟಮೂರ್ತಿ(77) ಗುರುವಾರ ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ ಪುತ್ರ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಬಿಎಂವಿ ಶಾಲೆಯ ಟ್ರಸ್ಟಿಯೂ ಆಗಿದ್ದ ಇವರು ರೈತ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರ ಅಂತ್ಯಕ್ರಿಯೆಯನ್ನು ಊರ ಹೊರವಲಯದ ಅವರ ತೋಟದಲ್ಲೆ ನೆರವೇರಿಸಲಾಯಿತು. ಬಿ.ಎಂ.ವಿ ಶಾಲೆಯಲ್ಲಿ ನಡೆದ ವೆಂಕಟಮೂರ್ತಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಲ್. ಕಾಳಪ್ಪ, ಅಧ್ಯಕ್ಷ ಬಿ.ವಿ.ಮುನೇಗೌಡ, ಸಂತೆ ನಾರಾಯಣಸ್ವಾಮಿ ಮತ್ತು ಬೈರೇಗೌಡ ಅವರು ಮಾತನಾಡಿ ವೆಂಕಟಮೂರ್ತಿ ಅವರು ಸಂಸ್ಥೆಗೆ ಹಾಗೂ ಸಾರ್ವಜನಿಕ ಜೀವನದಲ್ಲಿ ಸಲ್ಲಿಸಿದ ಅಮೋಘ ಸೇವೆಯನ್ನು ಸ್ಮರಿಸಿದರು.

 ಶಾಸಕ ವಿ.ಮುನಿಯಪ್ಪ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ರೈತ ಸಂಘದ ರಾಜ್ಯ ಪ್ರಧಾನ ಕಾರ‍್ಯದರ್ಶಿ ಬೈರೇಗೌಡ, ಪುಟ್ಟು ಆಂಜಿನಪ್ಪ ಅಂತಿಮ ದರ್ಶನ ಪಡೆದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version