Home News ಕಾಳನಾಯಕನಹಳ್ಳಿ ಸರ್ಕಾರಿ ಶಾಲೆಗೆ ಜಿಲ್ಲಾ ಪಂಚಾಯಿತಿ CEO ಭೇಟಿ

ಕಾಳನಾಯಕನಹಳ್ಳಿ ಸರ್ಕಾರಿ ಶಾಲೆಗೆ ಜಿಲ್ಲಾ ಪಂಚಾಯಿತಿ CEO ಭೇಟಿ

0
Zilla Panchayat CEO Visit Kalanayakanahalli Government School

ಕಾಳನಾಯಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದ್ದು ಕೊಠಡಿಗಳ ಸಂಖ್ಯೆ ಕಡಿಮೆಯಿದ್ದು ಶಿಥಿಲಗೊಂಡಿರುವ ಕೊಠಡಿಗಳನ್ನು ನವೀಕರಿಸುವಂತೆ ಹಾಗೂ ಶಾಲೆ ಕಾಂಪೌಡ್ ಹಾಗೂ ಸುಸರ್ಜಿತ ರಸ್ತೆಯನ್ನು ಮಾಡುವಂತೆ ಇಒ ಹಾಗೂ ಪಿಡಿಒ ರವರಿಗೆ Zilla Panchayat CEO ಶಿವಶಂಕರ್ ರವರು ಅದೇಶಿಸಿದರು.

 ಗ್ರಾಮದ ರಸ್ತೆಗಳನ್ನು ಚರಂಡಿಗಳನ್ನು ವೀಕ್ಷಿಸಿ ಇಒ,  ಪಿಡಿಒ ರವರನ್ನು ಸ್ಥಳಕ್ಕೆ ಕರೆಸಿ ಕಾಮಗಾರಿಗಳನ್ನು ಮಾಡಲು ಆಕ್ಷನ್ ಪ್ಲಾನ್ ನಲ್ಲಿ ಸೇರಿಸಿ ತ್ವರಿತವಾಗಿ ಕಾಮಗಾರಿಗಳನ್ನು ಮಾಡಿ ಎಂದು ಇಒ ಮತ್ತು ಬಿಇಒ ರವರಿಗೆ ತಿಳಿಸಿದರು.

ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿಗಳನ್ನು ವೀಕ್ಷಿಸಿದ ಅವರು ಪಿಡಿಒ ರವರಿಗೆ ಗ್ರಾಮದಲ್ಲಿ  ಸ್ವಚ್ಚತೆ  ಹಾಗೂ ನರೇಗಾ ಯೋಜನೆಯಲ್ಲಿ ಕಾಮಗಾರಿಗಳನ್ನು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

 ಪಿಎಲ್‍ಡಿ ಬ್ಯಾಂಕ್ ಸದಸ್ಯ ಕಾಳನಾಯಕನಹಳ್ಳಿ ಕೆ.ಎಂ.ಬೀಮೇಶ್, ಕೆ.ಎನ್.ರಮೇಶ್, ಅನಿಲ್ ಕುಮಾರ್, ಪಿಡಿಒ ಪ್ರಶಾಂತ್ ಕುಮಾರ್ ಹಾಗೂ ಕಾಳನಾಯಕನಹಳ್ಳಿ ಗ್ರಾಮಸ್ಥರು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version