ಗೋಡಂಬಿ ಗಿಡಕ್ಕೆ ಸಕಾಲದಲ್ಲಿ ಪೋಷಣೆ, ಔಷಧಿ ಸಿಂಪಡನೆ, ಪ್ರೂನಿಂಗ್ ಮತ್ತು ಪುನರುಜ್ಜೀವನ ಕಾರ್ಯವನ್ನು ಮಾಡಿದಲ್ಲಿ ಅಧಿಕ ಇಳುವರಿಯನ್ನು ಹೊಂದಬಹುದು ಎಂದು ತೋಟಗಾರಿಕಾ ತಜ್ಞ ಡಾ.ಶ್ರೀನಿವಾಸಪ್ಪ ಅಭಿಪ್ರಾಯಪಟ್ಟರು.
ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಗ್ರಾಮೀಣ ಜಾಗೃತಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಶೆಟ್ಟಿಹಳ್ಳಿ ಮತ್ತು ಮಲ್ಲಹಳ್ಳಿಯಲ್ಲಿ ಗೋಡಂಬಿ ತೋಟದಲ್ಲಿ ರೈತರು ಮತ್ತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವ ‘ಗೋಡಂಬಿ ಅಂಬಿಗ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೂಲಿ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಕೃಷಿಕರಿಗೆ ಕಡಿಮೆ ಕೆಲಸದಲ್ಲಿ ಉಪ ಆದಾಯ ಪಡೆಯಲು ಗೇರು ಬೆಳೆ ಅನುಕೂಲವಾಗಿದೆ. ಅತ್ಯಲ್ಪ ನೀರು ಹಾಗೂ ಕಡಿಮೆ ನಿರ್ವಹಣೆ ವೆಚ್ಚದಲ್ಲಿ ಗೇರು ಬೆಳೆಯಬಹುದು. ಬೂದಿರೋಗ ಕಾಣಿಸುಕೊಂಡಾಗ ಹೆಚ್ಚಾಗಿರೋ ರೆಂಬೆ-ಕೊಂಬೆ ಪ್ರೂನಿಂಗ್ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಡಕೊರಕ, ಕಜ್ಜೀ ಹುಳುಗಳನಿಯಂತ್ರಣ, ಅಂತರ ಬೇಸಾಯ ಮುಂತಾದ ವಿಷಯಗಳ ಬಗ್ಗೆ ವಿವರಿಸಿ, ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ಕೃಷಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕ ಡಾ.ವೈ.ಎನ್.ಶಿವಲಿಂಗಯ್ಯ, ಕೃಷಿ ಮಾರುಕಟ್ಟೆಯ ಪ್ರಾಧ್ಯಾಪಕ ಕಿರಣ್, ರೈತರಾದ ಗಜೇಂದ್ರ, ಮಂಜುನಾಥ್, ಅಶೋಕ್, ನಾರಾಯಣರೆಡ್ಡಿ ಹಾಗೂ ಕೃಷಿ ವಿದ್ಯಾರ್ಥಿಗಳು ಹಾಜರಿದ್ದರು.
- Advertisement -
- Advertisement -
- Advertisement -







