
Sidlaghatta ಶಿಡ್ಲಘಟ್ಟ : ಶಾಸಕ ಬಿ.ಎನ್. ರವಿಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಎಂಸಿಸಿ ತಂಡದ ವತಿಯಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲಾಮಟ್ಟದ BNR ಕಪ್–2026 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಗಸ್ಟ್ 6ರಿಂದ 9ರವರೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಪಂದ್ಯಾವಳಿಯಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಂದ ತಲಾ ಎಂಟು ಹಾಗೂ ಶಿಡ್ಲಘಟ್ಟ ನಗರದಿಂದ ನಾಲ್ಕು ಸೇರಿ ಒಟ್ಟು 20 ತಂಡಗಳು ಭಾಗವಹಿಸಲಿವೆ. ಆಗಸ್ಟ್ 6ರಂದು ಬೆಳಿಗ್ಗೆ 9 ಗಂಟೆಗೆ ಪಂದ್ಯಾವಳಿಗೆ ಚಾಲನೆ ದೊರೆಯಲಿದ್ದು, 9ರಂದು ಅಂತಿಮ ಪಂದ್ಯ ನಡೆಯಲಿದೆ.
ಆಗಸ್ಟ್ 8ರಂದು ಸಂಜೆ ಶಾಸಕ ರವಿಕುಮಾರ್ ಅವರ ಹುಟ್ಟುಹಬ್ಬವನ್ನು ಆಟಗಾರರು ಮತ್ತು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ಆಚರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ವಿಜೇತ ತಂಡಕ್ಕೆ ₹1,11,101 ಹಾಗೂ ಟ್ರೋಫಿ, ರನ್ನರ್ ಅಪ್‌ಗೆ ₹55,550 ಮತ್ತು ಟ್ರೋಫಿ ನೀಡಲಾಗುವುದು. ಉತ್ತಮ ಬ್ಯಾಟ್ಸ್‌ಮನ್, ಬೌಲರ್, ಫೀಲ್ಡರ್ ಹಾಗೂ ಅತ್ಯುತ್ತಮ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
In English: The BNR Cup 2026 tennis-ball cricket tournament, organised by the MCC team to mark MLA B.N. Ravikumar’s birthday, will be held at Nehru Stadium in Sidlaghatta from August 6 to 9. Twenty teams — eight each from Chikkaballapur and Kolar districts, and four from Sidlaghatta city — will compete, with the winning team receiving ₹1,11,101 and a trophy, and the runner-up ₹55,550 and a trophy.












