ಜಿಲ್ಲಾ ಪಂಚಾಯಿತಿ ಸದಸ್ಯರು ಬುಧವಾರ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳು, ಮಳೆಗಾಲಕ್ಕೆ ಮುನ್ನ ನೀರು ಹಿಡಿದಿಡಲು ಕೈಗೊಂಡಿರುವ ವಿವಿಧ ಯೋಜನೆಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.
ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿಯ ಬೆಳ್ಳೂಟಿ ಗ್ರಾಮದಲ್ಲಿ ಕುಂಟೆ ಅಭಿವೃದ್ಧಿ ಕಾಮಗಾರಿ, ಕೊತ್ತನೂರು ಗ್ರಾಮ ಪಂಚಾಯಿತಿಯ ಗೊರ್ಮಡುಗು ಕುಂಟೆ ಅಭಿವೃದ್ಧಿ ಕಾಮಗಾರಿ, ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿಯ ಚಿಕ್ಕದಾಸರಹಳ್ಳಿ ಹತ್ತಿರದ ಕಲ್ಯಾಣಿ, ಚೀಮಂಗಲ ಗ್ರಾಮ ಪಂಚಾಯಿತಿಯ ರಾಜೀವ್ ಗಾಂಧಿ ಸೇವಾ ಕೇಂದ್ರ, ಸರ್ಕಾರಿ ಶಾಲೆಯ ಕಾಂಪೌಂಡ್, ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿಯ ಹೇಮಾರ್ಲಹಳ್ಳಿಯಲ್ಲಿ ಉದ್ಯಾನವನ, ಹೊಸಪೇಟೆ ಗ್ರಾಮ ಪಂಚಾಯಿತಿಯ ಹಿರೇಬಲ್ಲ ಶಾಲೆಯ ಕಾಂಪೌಂಡ್, ಅಂಗನವಾಡಿ ಕೇಂದ್ರ ಕಟ್ಟಡ, ನೆನಸು ಗುಂಡಿ ಮತ್ತು ಮಳೆನೀರು ಕೊಯ್ಲು, ಜಂಗಮಕೋಟೆ ಗ್ರಾಮ ಪಂಚಾಯಿತಿಯ ಕಲ್ಯಾಣಿ ವೀಕ್ಷಿಸಿದರು.
ಇದರೊಂದಿಗೆ ವೆಂಕಟಾಪುರ, ಹೊಸಪೇಟೆ, ಮಳಮಾಚನಹಳ್ಳಿ, ಅಬ್ಲೂಡು, ಪಲಿಚೇರ್ಲು, ದೊಡ್ಡತೇಕಹಳ್ಳಿ, ತಿಮ್ಮನಾಯಕನಹಳ್ಳಿ, ದಿಬ್ಬೂರಹಳ್ಳಿ, ತಲಕಾಯಲಬೆಟ್ಟ, ಈ ತಿಮ್ಮಸಂದ್ರ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿ, ಮಳೆ ನೀರನ್ನು ಹಿಡಿದಿಡುವ ವಿವಿಧ ಕಾಮಗಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಣ್ಣ, ಎಚ್.ಸುಬ್ಬಾರೆಡ್ಡಿ, ಶ್ರೀನಿವಾಸ್, ಪ್ರಮೀಳಾ ಪ್ರಕಾಶ್ ರೆಡ್ಡಿ, ಅರುಂಧತಿ ಅಶ್ವತ್, ರಾಜಾಕಾಂತ್, ಕಮಲಮ್ಮ, ಬಂಕ್ ಮುನಿಯಪ್ಪ, ನಾರಾಯಣಮ್ಮ ವೆಂಕಟೇಶ್, ವರಲಕ್ಷ್ಮಿ ನಾರಾಯಣಸ್ವಾಮಿ, ಪ್ರಕಾಶ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ನೋಮೇಶ್ ಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ, ಇಒ ಶಿವಕುಮಾರ್, ಬೆಳ್ಳೂಟಿ ಸಂತೋಷ್, ಪಿಡಿಒ ಅರುಣ ಕುಮಾರಿ ಹಾಜರಿದ್ದರು.
- Advertisement -
- Advertisement -
- Advertisement -