ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ “ಡಾಲ್ಫಿನ್ ಹಬ್ಬ” ಆಚರಣೆ

0
253

ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಗುರುವಾರ ಮಕ್ಕಳ ಕ್ರಿಯಾಶೀಲತೆಯನ್ನು ಪ್ರದರ್ಶಿಸುವ ಸಲುವಾಗಿ ಮಕ್ಕಳ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿದರು. ಮಕ್ಕಳ ಸೃಜನಶೀಲತೆಯನ್ನು ಪ್ರದರ್ಶಿಸುವ “ಡಾಲ್ಫಿನ್ ಹಬ್ಬ”ವನ್ನು ಆಯೋಜಿಸಲಾಗಿತ್ತು.
ವಿಜ್ಞಾನದ ವಿವಿಧ ಶಾಖೆಗಳು, ಸಮಾಜ, ಕೃಷಿ, ಗಣಿತ, ಇತಿಹಾಸ ಮುಂತಾದ ವಿಷಯಗಳಲ್ಲಿ ಮಕ್ಕಳು ಬೇರೆ ಬೇರೆ ಅಂಶಗಳನ್ನು ಆರಿಸಿಕೊಂಡು ಅವುಗಳನ್ನು ಪ್ರಾತ್ಯಕ್ಷಿಕೆಯ ರೂಪದಲ್ಲಿ ಪ್ರದರ್ಶಿಸಿ ಆಗಮಿಸಿದ ಗಣ್ಯರಿಗೆ, ಪೋಷಕರಿಗೆ ಹಾಗೂ ಇತರ ವಿದ್ಯಾರ್ಥಿಗಳಿಗೆ ವಿವರಿಸಿದರು.
ಆಹಾರದ ಮೇಳವನ್ನೂ ವಿದ್ಯಾರ್ಥಿಗಳು ಏರ್ಪಡಿಸಿದ್ದರು. ವಿವಿಧ ತಿನಿಸುಗಳನ್ನು ತಾವೇ ತಯಾರಿಸಿ ನೀಡುತ್ತಿದ್ದರು. ಹಲವಾರು ಸಿಹಿ ಖಾದ್ಯಗಳನ್ನು ಸಹ ಇರಿಸಿ ಸಹಪಾಠಿಗಳಿಗೆ ಮಾರುವ ಮೂಲಕ ವ್ಯಾಪಾರಿ ಜ್ಞಾನವನ್ನು ಸಹ ಪ್ರದರ್ಶಿಸಿದರು. ವಿವಿಧ ಕಲಾಕೃತಿಗಳನ್ನು ಮಾರಾಟದ ಮಳಿಗೆಗಳನ್ನೂ ಸಹ ವಿದ್ಯಾರ್ಥಿಗಳು ತೆರೆದಿದ್ದರು.
ಸಾಂಸ್ಕೃತಿಕ ಕಲಾ ಪ್ರದರ್ಶನವನ್ನು ಸಹ ವಿದ್ಯಾರ್ಥಿಗಳು ನಡೆಸಿಕೊಟ್ಟರು. ವಿವಿಧ ವೇಷಭೂಷಣಗಳನ್ನು ಧರಿಸಿ ರಂಜಿಸಿದರು.
ಶಾಸಕ ವಿ.ಮುನಿಯಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸೋಮಶೇಖರರೆಡ್ಡಿ, ಡಾಲ್ಫಿನ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್, ನಿರ್ದೇಶಕಿ ಚಂದನಾ ಅಶೋಕ್, ಪ್ರಾಂಶುಪಾಲ ಥಾಮಸ್ ಫಿಲಿಪ್ಸ್, ಶ್ರೀನಿವಾಸರೆಡ್ಡಿ, ಲೋಕೇಶ್, ಮುನಿಶಾಮಪ್ಪ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!