ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿಯ ದಾಸರ್ಲಹಳ್ಳಿ, ಬುಡಗವಾರಹಳ್ಳಿ, ಮರಳಪ್ಪನಹಳ್ಳಿ ಮತ್ತು ಅಲಗುರ್ಕಿ ಗ್ರಾಮಸ್ಥರು ಪ್ರತಿನಿತ್ಯ ತಾವೇ ರೂಪಿಸಿಕೊಂಡ ತಾತ್ಕಾಲಿಕ ತೆಪ್ಪದ ಮೂಲಕ ದಾಟಿ ಹೋಗಬೇಕಾದ ಪರಿಸ್ಥಿತಿ ಮೂಡಿದೆ.
ತಲಕಾಯಲಬೆಟ್ಟ ವೆಂಕಟರಮಣಸ್ವಾಮಿ ದೇವಸ್ಥಾನದಿಂದ ಒಂದು ಕಿಮೀ ದೂರದಲ್ಲಿರುವ ದಾಸಾರ್ಲಹಳ್ಳಿಯಿಂದ ಜನರು ಟಿ.ವೆಂಕಟಾಪುರದ ವಾಹನ ನಿಲ್ದಾಣ ತಲುಪಲು ಕೇವಲ ಅರ್ಧ ಫರ್ಲಾಂಗ್ ದೂರ ಬರಬೇಕಷ್ಟೆ. ಆದರೆ ಈ ದೂರ ಕ್ರಮಿಸಲು ಅವರಿಗೆ ಅಡ್ಡವಾಗಿ ತಲಕಾಯಲಬೆಟ್ಟ ಕೆರೆಯ ಕಾಲುವೆ ಹರಿಯುತ್ತದೆ. ಮಳೆಗಾಲದಲ್ಲಿ ಈ ಪರಿಸ್ಥಿತಿ ಇರುತ್ತದೆ. ಕೆರೆಯ ನೀರು ಬರಿದಾದಾಗ ಮಾಮೂಲಿನಂತೆಯೇ ನಡೆದು ಹೋಗುವ ಜನ ಕಾಲುವೆಯಲ್ಲಿ ನೀರು ಹರಿದಾಗ ತಾತ್ಕಾಲಿಕವಾಗಿ ತಾವೇ ಡ್ರಮ್‌ಗಳ ಮೂಲಕ ನಿರ್ಮಿಸಿಕೊಂಡಿರೋ ತೆಪ್ಪದಲ್ಲಿ ಹಗ್ಗವನ್ನು ಎರಡೂ ಬದಿಯಲ್ಲಿ ಕಟ್ಟಿಕೊಂಡು ದಾಟುತ್ತಾರೆ.
ಕಳೆದ ಹಲವು ವರ್ಷಗಳಿಂದ ಸಮರ್ಪಕ ಮಳೆಯ ಇಲ್ಲದ ಕಾರಣ ಕೆರೆ ಪೂರ್ಣ ಪ್ರಮಾಣದಲ್ಲಿ ತುಂಬುತ್ತಿರಲಿಲ್ಲ. ಕೆರೆಗೆ ನೀರು ಬಂದರೂ ಬಹುಬೇಗ ಖಾಲಿಯಾಗುತ್ತಿತ್ತು. ಆದ್ರೆ ಕಳೆದ ವರ್ಷ ಸುರಿದ ಮಳೆ ಹಾಗೂ ಕೆರೆಯಲ್ಲಿನ ನೀರು ಹೊರ ಬಿಡಬಾರದು ಅಂತ ಜಿಲ್ಲಾಧಿಕಾರಿಯ ಆದೇಶದಿಂದ ಕೆರೆಯಲ್ಲಿ ನೀರು ಖಾಲಿಯಾಗಲಿಲ್ಲ. ಹೀಗಾಗಿ ಕಳೆದ ವರ್ಷದಿಂದ ಸಹ ತುಂಬಿದ ಕೆರೆಯಲ್ಲಿ ಈಚೆಗೆ ಬಿದ್ದ ನೀರು ಕಾಲುವೆಯ ಮೂಲಕ ಹರಿದು ಗ್ರಾಮಸ್ಥರು ಓಡಾಡುತ್ತಿದ್ದ ದಾರಿಯಲ್ಲಿ ಹರಿಯುತ್ತಿದೆ. ವಿಧಿಯಿಲ್ಲದೇ ಜನರು ತೆಪ್ಪದಿಂದ ದಾಟುವಂತಾಗಿದೆ.
‘ದಾಸಾರ್ಲಹಳ್ಳಿಯಲ್ಲಿ ನೂರು ಮನೆಗಳಿವೆ. ಅಲ್ಲಿ ಶಾಲೆಯಿದೆ. ಆದರೆ ಬುಡಗವಾರಹಳ್ಳಿ, ಮರಳಪ್ಪನಹಳ್ಳಿ ಮತ್ತು ಅಲಗುರ್ಕಿಗಳಿಂದ ಪ್ರೌಢಶಾಲೆಗೆ ಮತ್ತು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸುಮಾರು 10 ರಿಂದ 12 ಅಡಿ ನೀರಿರುವ ಕಾಲುವೆಯನ್ನು ತಾತ್ಕಾಲಿಕ ತೆಪ್ಪದಿಂದ ದಾಟಬೇಕಿದೆ. ಏನಾದರೂ ಅವಘಡಗಳು ಸಂಭವಿಸಿದರೆ ಯಾರು ಹೊಣೆಯಾಗುತ್ತಾರೆ. ಈ ಜನರಿಗೆ ಪರ್ಯಾಯ ರಸ್ತೆಯಿದೆ. ದಾಸಾರ್ಲಹಳ್ಳಿಯಿಂದ ಮರ್ಲಪ್ಪನಹಳ್ಳಿ, ದಿಂಬಾರ್ಲಹಳ್ಳಿಯಿಂದ ತಲಕಾಯಲಬೆಟ್ಟ ಮುಖ್ಯ ರಸ್ತೆಗೆ ಬರಬೇಕು. ಹೀಗಿ ಸುತ್ತು ಬರಲು ಆರು ಕಿ.ಮೀ ದೂರವಾಗುತ್ತದೆ. ಸದಕ್ಕಾಗಿ ಕೇವಲ ಅರ್ಧ ಫರ್ಲಾಂಗ್ ದೂರವನ್ನು ನೀರಿನಲ್ಲಿ ದಾಟುತ್ತಾರೆ. ಸರ್ಕಾರದಿಂದ ಇಲ್ಲಿ ಸೇತುವೆಯನ್ನು ನಿರ್ಮಿಸಬೇಕು. ಅತ್ಯಂತ ಶೀಘ್ರವಾಗಿ ನಿರ್ಮಿಸಬಲ್ಲ ತೂಗುಸೇತುವೆಯನ್ನಾದರೂ ಇಲ್ಲಿ ನಿರ್ಮಿಸಿದರೆ ಜನಕ್ಕೆ ಬಹಳ ಅನುಕೂಲವಾಗುತ್ತದೆ’ ಎಂದು ಶಿಕ್ಷಕ ವೆಂಕಟರೆಡ್ಡಿ ತಿಳಿಸಿದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -