21.8 C
Sidlaghatta
Monday, February 23, 2026

ಮಾಸ್ಟರ್‌ ಆಫ್‌ ಲಾ ನಲ್ಲಿ ಪ್ರಥಮ ರ್ಯಾಂ ಕ್‌ ಶಿಡ್ಲಘಟ್ಟದ ಚಾಂದಿನಿ

- Advertisement -
- Advertisement -

ನಗರದ ಹಿರಿಯ ವಕೀಲ ಹಾಗೂ ನೋಟರಿ ಬಿ.ನೌಷಾದ್ ಅಲೀ ಮತ್ತು ನಿವೃತ್ತ ಎ.ಸಿ.ಡಿ.ಪಿ.ಒ ಎಸ್‌.ಕೆ.ತಾಜುನ್ನಿಸಾ ದಂಪತಿಯ ಪುತ್ರಿ ಎನ್‌.ಚಾಂದಿನಿ ಅವರು ಮಾಸ್ಟರ್‌ ಆಫ್‌ ಲಾ ನಲ್ಲಿ ಪ್ರಥಮ ರ್ಯಾಂ ಕ್‌ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಎಲ್‌.ಎಲ್‌.ಎಮ್‌ನ ಕಾಸ್ಟಿಟ್ಯೂಷನ್‌ ಲೀಗಲ್‌ ಆರ್ಡರ್‌ ವಿಭಾಗದ ಕಾನೂನು ಪರೀಕ್ಷೆಯಲ್ಲಿ ಪ್ರಥಮ ರ್ಯಾಂಶಕ್‌ ಬಂದಿದ್ದು, ಬೆಂಗಳೂರು ವಿಶ್ವವಿದ್ಯಾಲಯದ 51ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ವಜೂಬಾಯಿ ವಾಲಾ ಅವರು ಚಿನ್ನದ ಪದಕ ಮತ್ತು ಪ್ರಮಾಣ ಪತ್ರವನ್ನು ನೀಡಿದ್ದಾರೆ. ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ, ಉಪಕುಲಪತಿ ಪ್ರೊ.ಬಿ.ತಿಮ್ಮೇಗೌಡ ಈ ಸಂದರ್ಭದಲ್ಲಿ ಹಾಜರಿದ್ದರು.
‘ಎಲ್‌.ಎಲ್‌.ಎಮ್‌ ನ ಕಾಸ್ಟಿಟ್ಯೂಷನ್‌ ಲೀಗಲ್‌ ಆರ್ಡರ್‌ ಕೋರ್ಸ್‌ ಬಹಳ ಕಠಿಣವಾದದ್ದು. ನನ್ನ ತಂದೆ, ತಾಯಿ ಮತ್ತು ಅಕ್ಕ ಬಿ.ನೌತಾಜ್‌ ಮಾರ್ಗದರ್ಶನದಲ್ಲಿ ಶ್ರಮವಹಿಸಿ ಓದಿದ್ದಕ್ಕೆ ಚಿನ್ನದ ಪದಕ ಲಭಿಸಿರುವುದು ಸಂತಸ ತಂದಿದೆ’ ಎಂದು ಎನ್‌.ಚಾಂದಿನಿ ತಿಳಿಸಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!