ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶನಿವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಕೊಡಗಿನ ಸಂತ್ರಸ್ತರ ನೆರವಿಗೆ ದೇಣಿಗೆಯನ್ನು ಸಂಗ್ರಹಿಸಿದ ನಂತರ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅದ್ಯಕ್ಷ ತಾದೂರು ಮಂಜುನಾಥ್ ಮಾತನಾಡಿದರು.
ಕಷ್ಟದ ಬದುಕನ್ನು ಹತ್ತಿರದಿಂದ ಕಂಡ ರೈತರು ಸಹಜವಾಗಿ ಕೊಡಗಿನ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ. ಸುಮಾರು ಐವತ್ತು ಸಾವಿರ ರೂಗಳಷ್ಟು ತಾಲ್ಲೂಕು ರೈತ ಸಂಘದಿಂದ ಶನಿವಾರ ಸಂಗ್ರಹಿಸಲಾಯಿತು ಎಂದು ಅವರು ತಿಳಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಕೆಲವು ರೈತರು ರೇಷ್ಮೆ ಗೂಡನ್ನು ನೀಡಿದರೆ, ಕೆಲವರು ನಗದನ್ನು ನೀಡಿದರು. ಅವರು ದೇಣಿಗೆಯಾಗಿ ನೀಡಿದ ರೇಷ್ಮೆ ಗೂಡನ್ನು ಹರಾಜು ಹಾಕಿ ನಗದಾಗಿಸಿದೆವು. ಒಟ್ಟು 20 ಸಾವಿರ ರೂಗಳು ಸಂಗ್ರಹವಾಯಿತು. ರೈತ ಸಂಘದ ಸದಸ್ಯರು ಅದಕ್ಕೆ 30 ಸಾವಿರ ರೂ ಸೇರಿಸಿ ಒಟ್ಟು 50 ಸಾವಿರ ರೂ ಒಟ್ಟು ಮಾಡಿದೆವು. ನಮ್ಮ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡರು ಹಾಗೂ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಜಿಲ್ಲಾದ್ಯಂತ ಸಂಗ್ರಹವಾದ ಹಣವನ್ನು ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಲಿದ್ದಾರೆ ಎಂದು ಹೇಳಿದರು.
ರೈತ ಸಂಘದ ಮುನಿನಂಜಪ್ಪ, ಶ್ರೀನಿವಾಸ್, ವೇಣು, ಟಿ.ಕೃಷ್ಣಪ್ಪ, ರಾಮಚಂದ್ರಪ್ಪ, ಎಸ್.ಎಂ.ನಾರಾಯಣಸ್ವಾಮಿ, ರಮೇಶ್, ಶಿವಮೂರ್ತಿ, ಏಜಾಜ್ ಹಾಜರಿದ್ದರು.
- Advertisement -
- Advertisement -
- Advertisement -