ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ರೇಷ್ಮೆ ಕೃಷಿಯ ವೀಕ್ಷಣೆಗೆ ರಾಮನಗರದಿಂದ ಸುಮಾರು 50 ಮಂದಿ ರೈತರು ಗುರುವಾರ ಆಗಮಿಸಿದ್ದರು.
ಸಮಗ್ರ ಕೃಷಿ ಪದ್ಧತಿ, ಕೃಷಿ ಹೊಂಡದಿಂದ ನೀರಿನ ಸದ್ಬಳಕೆ, ರೇಷ್ಮೆಯಲ್ಲಿ ಹಸಿರು ಎಲೆ ಗೊಬ್ಬರವಾಗಿ ಪರಿವರ್ತಿಸಲು ಸೆಣಬು ಹುರಳಿ ಬೆಳೆದಿರುವುದು, ಕುರಿ, ಹಸು ಸಾಕಣೆ, ರೇಷ್ಮೆ ಕೃಷಿಯಲ್ಲಿನ ಅನುಭವಗಳನ್ನು ರೈತರು ಕೇಳಿ ತಿಳಿದುಕೊಂಡರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಕೃಷಿ ಅಧ್ಯಯನ ಪ್ರವಾಸದಲ್ಲಿ ಎರಡು ದಿನಗಳ ಕಾಲ ಅಧಿಕಾರಿಗಳಿಂದ ತರಬೇತಿಯನ್ನು ಪಡೆದು ಪ್ರಾತ್ಯಕ್ಷಿಕೆಯಾಗಿ ಪ್ರಗತಿಪರ ರೈತರೊಂದಿಗೆ ಸಂವಾದಿಸಲು, ಹಿಪ್ಪುನೇರಳೆ ತೋಟ, ಹುಳು ಸಾಕಾಣಿಕಾ ಮನೆಯನ್ನು ನೋಡಲು ಹಿತ್ತಲಹಳ್ಳಿಗೆ ಬಂದಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಮನಗರ ರಾಮಪ್ಪ ಮಾಸ್ತರ್, ‘ಯಶಸ್ವಿ ರೈತರಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರು ರೈತರು ಕೂಡ ಯಶಸ್ವಿಯಾಗಬಹುದು ಎಂದು ಪ್ರೋತ್ಸಾಹದಾಯಕವಾಗಿ ನಮ್ಮನ್ನು ಉತ್ತೇಜಿಸಿದ್ದಾರೆ. ಸಾಮಾನ್ಯವಾಗಿ ರೈತರು ಕಷ್ಟದಲ್ಲಿದ್ದೇವೆ ಎನ್ನುತ್ತಾರೆ. ಆದರೆ ಇವರು ನಾನು ರೈತನಾಗಿ ಆರ್ಥಿಕವಾಗಿ ಚೆನ್ನಾಗಿದ್ದೇನೆ, ನೀವೂ ಅದೇ ರೀತಿ ಭೂಮಿಯನ್ನು ನಂಬಿದರೆ ಯಶಸ್ವಿಯಾಗುವಿರಿ ಎಂದು ಧೈರ್ಯವನ್ನು ತುಂಬಿದ್ದಾರೆ. ಅವರ ಕೃಷಿ ಅನುಭವದಿಂದ ಸಾಕಷ್ಟು ಕಲಿತೆವು’ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ್ಯೋತಿ, ಕುಮಾರ್ ಹಾಜರಿದ್ದರು.
- Advertisement -
- Advertisement -
- Advertisement -