ಶಿಡ್ಲಘಟ್ಟ ನಗರಸಭೆ ಚುನಾವಣೆಗೆ ಸ್ಪರ್ದಿಸಿರುವ ಅಭ್ಯರ್ಥಿಗಳ ಪ್ರಚಾರ ಕಾರ್ಯ ಭರದಿಂದ ಸಾಗಿದ್ದು, ೩೧ ಸ್ಥಾನಗಳಿಗೆ ಒಟ್ಟು ೧೧೫ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಸೆಣೆಸಲಿದ್ದಾರೆ. ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗಾಗಿ ಕಾಂಗ್ರೆಸ್‌ನಿಂದ ೩೧, ಜೆಡಿಎಸ್ ೩೧, ಬಿಜೆಪಿ ೧೨, ಬಿಎಸ್‌ಪಿ ೦೬, ಎಸ್‌ಪಿ ೦೧, ಕೆಜೆಪಿ ೦೧, ಆರ್‌ಡಿಪಿಐ ೦೧ ಮತ್ತು ಪಕ್ಷೇತರರು ೩೨ ಮಂದಿ ಕಣದಲ್ಲಿದ್ದಾರೆ.
ನಗರದ ವಾರ್ಡ್ ಸಂಖ್ಯೆಯ ೦೨, ೦೯, ೧೦, ೧೬, ೧೭ ಮತ್ತು ೨೪ ರಲ್ಲಿ ತಲಾ ಇಬ್ಬರು ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿಯಿದೆ. ವಾರ್ಡ್ ಸಂಖ್ಯೆ ೧೧, ೧೩, ೨೨, ೨೩, ೩೦ ಮತ್ತು ೩೧ ರಲ್ಲಿ ತಲಾ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದು ಕಾಂಗ್ರೆಸ್, ಜೆಡಿಎಸ್ ಹಾಗು ಬಿಜೆಪಿ ನಡುವೆ ಹಣಾಹಣಿ ನಡೆಯಲಿದೆ. ಇನ್ನುಳಿದ ವಾರ್ಡುಗಳಲ್ಲಿ ನಾಲ್ಕು ಮತ್ತು ನಾಲ್ಕಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ವಾರ್ಡ್ ಸಂಖ್ಯೆ, ವಾರ್ಡ್ ಹೆಸರು, ಅಭ್ಯರ್ಥಿ ಹೆಸರು, ಪಕ್ಷದ ವಿವರ ಕ್ರಮವಾಗಿ ಕೆಳಗಿನಂತಿದೆ.
ವಾರ್ಡ್ ೧ : ಪದ್ಮಿನಿ (ಜೆಡಿಎಸ್), ಬಿ.ಸವಿತಾ (ಕಾಂಗ್ರೆಸ್), ಸಿಂಧುಶ್ರೀ.ಕೆ.(ಬಿಜೆಪಿ), ಎನ್.ರಾಧ (ಪಕ್ಷೇತರ)
ವಾರ್ಡ್ ೨ : ಎಂ.ಬ್ಯಾಟರಾಯಪ್ಪ (ಕಾಂಗ್ರೆಸ್), ಸುರೇಶ.ಕೆ.(ಜೆಡಿಎಸ್)
ವಾರ್ಡ್ ೩ : ಎಸ್.ಚಿತ್ರ (ಕಾಂಗ್ರೆಸ್), ಲಕ್ಷ್ಮೀ.ಎನ್. (ಜೆಡಿಎಸ್), ಲಲಿತಮ್ಮ (ಬಿಜೆಪಿ), ನಾಗಮಣಿ.ಜೆ.ಎಂ (ಪಕ್ಷೇತರ), ಲಕ್ಷ್ಮಮ್ಮ (ಪಕ್ಷೇತರ)
ವಾರ್ಡ್ ೪ : ಪೈರೋಜ್ ಪಾಷ (ಬಿ.ಎಸ್.ಪಿ), ಲಕ್ಷ್ಮಯ್ಯ (ಜೆಡಿಎಸ್), ಜೆ. ಶ್ರೀರಾಮಯ್ಯ (ಕಾಂಗ್ರೆಸ್), ಮಹಮ್ಮದ್ ಪಾಷ (ಪಕ್ಷೇತರ), ಶಿವಕುಮಾರ್. ಎಂ.(ಪಕ್ಷೇತರ), ಬಿ.ಸಲಾಂ (ಪಕ್ಷೇತರ)
ವಾರ್ಡ್ ೫ : ಆಯೀಷಾ ಸುಲ್ತಾನ (ಜೆಡಿಎಸ್), ಶಕೀಲಬೇಗಂ (ಕಾಂಗ್ರೆಸ್), ಗೋಹರ್ ಜಾನ್ (ಪಕ್ಷೇತರ)
ವಾರ್ಡ್ ೬ : ವಿ.ನರಸಿಂಹ ಮೂರ್ತಿ (ಜೆಡಿಎಸ್), ಮುನಿರಾಜ.ಎಂ. (ಕಾಂಗ್ರೆಸ್), ರಾಮಚಂದ್ರ.ಎ. (ಬಿ.ಎಸ್.ಪಿ), ಪ್ರದೀಪ.ಎನ್. (ಪಕ್ಷೇತರ)
ವಾರ್ಡ್ ೭ : ಜಿ.ಗೌರಮ್ಮ (ಜೆಡಿಎಸ್), ಶಿವಮ್ಮ (ಕಾಂಗ್ರೆಸ್), ಕೆ.ಎಂ.ಮುನಿರತ್ನಮ್ಮ (ಪಕ್ಷೇತರ)
ವಾರ್ಡ್ ೮ : ಜಿ.ಪದ್ಮ (ಬಿ.ಎಸ್.ಪಿ), ಮಂಜುಶ್ರೀ.ಸಿ. (ಬಿಜೆಪಿ), ವಿಜಯ (ಕಾಂಗ್ರೆಸ್), ಸಿ.ಎಂ.ಸುಮಿತ್ರ ರಮೇಶ್ (ಜೆಡಿಎಸ್), ಪ್ರಿಯಾಂಕ.ಜಿ. (ಪಕ್ಷೇತರ), ಮೀನಾಕ್ಷಿ.ಕೆ. (ಪಕ್ಷೇತರ)
ವಾರ್ಡ್ ೯ : ಎಂ ಮುರಳಿ (ಕಾಂಗ್ರೆಸ್), ಎಂ ವಿ ವೆಂಕಟಸ್ವಾಮಿ (ಜೆಡಿಎಸ್)
ವಾರ್ಡ್ ೧೦ : ಎಸ್.ಎಂ ಮಂಜುನಾಥ (ಕಾಂಗ್ರೆಸ್), ಎಸ್ ಹೈದರ್‌ವಲಿ ಪಾಷ (ಜೆಡಿಎಸ್)
ವಾರ್ಡ್ ೧೧ : ಅನಿಲ್‌ಕುಮಾರ್ ಎಲ್ (ಕಾಂಗ್ರೆಸ್), ಜಗದೀಶ್ ಬಿ (ಬಿಜೆಪಿ), ಶಶಿಧರ್ ಎಸ್ (ಜೆಡಿಎಸ್)
ವಾರ್ಡ್ ೧೨ : ಸಿ.ಎಂ ಬಾಬು (ಜೆಡಿಎಸ್), ಮುಸಾವರ್ (ಕಾಂಗ್ರೆಸ್), ಮೌಲ (ಬಿ.ಎಸ್.ಪಿ), ಖಾದರ್ ಪಾಷ (ಪಕ್ಷೇತರ), ಮುಭಾರಕ್ ಖಾನ್ (ಪಕ್ಷೇತರ), ಸಾದಿಕ್ ಪಾಷ (ಪಕ್ಷೇತರ)
ವಾರ್ಡ್ ೧೩ : ಉಮರ್ ಶಾಹಿದ್ ಎಂ (ಕಾಂಗ್ರೆಸ್), ಎಸ್ ಎ ನಾರಾಯಣಸ್ವಾಮಿ (ಬಿ.ಜೆ.ಪಿ), ಸೈಯದ್ ಸನಾವುಲ್ಲಾ (ಜೆಡಿಎಸ್)
ವಾರ್ಡ್ ೧೪ : ನೂರ್ ಜಾನ್ (ಬಿ.ಜೆ.ಪಿ), ಶಾಹಿದಾ (ಕಾಂಗ್ರೆಸ್), ಹಬೀಬ್ ಜಾನ್ (ಜೆಡಿಎಸ್), ಜೈಬಾ ಶೊಹರತ್ (ಪಕ್ಷೇತರ), ರತ್ನಮ್ಮ (ಪಕ್ಷೇತರ), ಸುಷ್ಮಾ ಎಂ (ಪಕ್ಷೇತರ)
ವಾರ್ಡ್ ೧೫ : ಜಿ.ಎನ್ ಮಂಜುಳ (ಜೆಡಿಎಸ್), ಲಕ್ಷ್ಮೀದೇವಮ್ಮ (ಕಾಂಗ್ರೆಸ್), ಶಾರದ ನಾಗೇಶ್ (ಬಿ.ಜೆ.ಪಿ), ತಸ್ಲಿಂ ಫಾತಿಮಾ (ಪಕ್ಷೇತರ), ಭಾಗ್ಯಲಕ್ಷ್ಮೀ ಶ್ರೀನಿವಾಸ (ಪಕ್ಷೇತರ), ಆರ್ ವಸಂತ (ಪಕ್ಷೇತರ)
ವಾರ್ಡ್ ೧೬ : ಎನ್ ಕೃಷ್ಣಮೂರ್ತಿ (ಕಾಂಗ್ರೆಸ್), ಮುನಿಕೃಷ್ಣಪ್ಪ (ಜೆಡಿಎಸ್)
ವಾರ್ಡ್ ೧೭ : ಅಲ್ಲ ಬಕಷ್ (ಜೆಡಿಎಸ್), ತನ್ವೀರ್ ಪಾಷ (ಕಾಂಗ್ರೆಸ್)
ವಾರ್ಡ್ ೧೮ : ನವಾಜ್ ಪಾಷ (ಕಾಂಗ್ರೆಸ್), ಎಸ್. ಷಫೀ (ಜೆಡಿಎಸ್), ಐ. ಶಬ್ಬೀರ್ (ಪಕ್ಷೇತರ)
ವಾರ್ಡ್ ೧೯ : ನಾಜೀಂ (ಜೆಡಿಎಸ್), ಸಲ್ಮ್ (ಕಾಂಗ್ರೆಸ್), ಫರೀದುನ್ನೀಸಾ (ಪಕ್ಷೇತರ), ಶಬ್ರೀನ್ (ಪಕ್ಷೇತರ)
ವಾರ್ಡ್ ೨೦ : ಅಮೀನ ಖಾತೂನ್ (ಜೆಡಿಎಸ್), ಪಿರ್ದೋಸ್ ಪರ್ವೀನ್ ತಾಜ್ (ಕಾಂಗ್ರೆಸ್), ಎಸ್. ಯಾಸ್ಮಿನ್ ತಾಜ್ (ಪಕ್ಷೇತರ)
ವಾರ್ಡ್ ೨೧ : ಎಂ. ಗಂಗಮ್ಮ (ಕಾಂಗ್ರೆಸ್), ಎನ್. ಸುಗುಣ (ಜೆಡಿಎಸ್), ಸುಮ ಪುರುಶೋತ್ತಮ್ ಮೋದಿ (ಬಿ.ಜೆ.ಪಿ), ಜಿ. ಗೌರಮ್ಮ (ಪಕ್ಷೇತರ)
ವಾರ್ಡ್ ೨೨ : ಕೃಷ್ಣಪ್ಪ (ಕಿಟ್ಟಿ) ಮೋದಿ (ಬಿ.ಜೆ.ಪಿ), ಮಂಜುನಾಥ ಟಿ (ಕಾಂಗ್ರೆಸ್), ರಾಜೇಂದ್ರ (ಜೆಡಿಎಸ್)
ವಾರ್ಡ್ ೨೩ : ಪುರುಷೋತ್ತಮ ಆರ್ (ಜೆಡಿಎಸ್), ರಘು (ಬಿ.ಜೆ.ಪಿ), ರಾಜ್‌ಕುಮಾರ್ (ಕಾಂಗ್ರೆಸ್)
ವಾರ್ಡ್ ೨೪ : ನಗೀನಾ (ಕಾಂಗ್ರೆಸ್), ಮುಸ್ತರುನ್ನಿಸಾ (ಜೆಡಿಎಸ್)
ವಾರ್ಡ್ ೨೫ : ರಿಯಾಜ್ ಖಾನ್ (ಜೆಡಿಎಸ್), ರಿಯಾಜ್ ಪಾಷ (ಕಾಂಗ್ರೆಸ್), ಹುಸೇನ್ ಸಾಬ್. ಎಲ್ (ಬಾಬು) (ಪಕ್ಷೇತರ)
ವಾರ್ಡ್ ೨೬ : ಗಂಗಮ್ಮರಾಜು (ಬಿ.ಎಸ್.ಪಿ), ವಹೀದ್‌ಕೌಸರ್ (ಜೆಡಿಎಸ್), ಸಲ್ಮಾತಾಜ್ (ಕಾಂಗ್ರೆಸ್), ನಸೀಮ್‌ತಾಜ್ (ಪಕ್ಷೇತರ), ಬೀಬೀಜಾನ್ (ಪಕ್ಷೇತರ)
ವಾರ್ಡ್ ೨೭ : ಗುಲ್ನಾಜ್ (ಕಾಂಗ್ರೆಸ್), ಫರಹಾನತಾಜ್ (ಜೆಡಿಎಸ್), ರಾಜೀಕಾಬಾನು (ಪಕ್ಷೇತರ), ಶಬೀನ್‌ತಾಜ್ (ಪಕ್ಷೇತರ)
ವಾರ್ಡ್ ೨೮ : ಜಬೀಉಲ್ಲಾ (ಕಾಂಗ್ರೆಸ್), ಪರೂಕ್‌ಪಾಷ (ಜೆಡಿಎಸ್), ಮೊಹಮ್ಮದ್ ಫರೀದುದ್ದೀನ್ (ಪಕ್ಷೇತರ), ಅಕ್ಬರ್ (ಪಕ್ಷೇತರ), ಹಿದಾಯತ್‌ಪಾಷ (ಪಕ್ಷೇತರ),
ವಾರ್ಡ್ ೨೯ : ಅಪ್ಸರ್‌ಪಾಷ (ಬಿ.ಎಸ್.ಪಿ), ಬಿ.ಮುಬಾರಕ್ ಖಾನ್ (ಜೆಡಿಎಸ್), ಸಮೀರ್‌ಖಾನ್ (ಕಾಂಗ್ರೆಸ್), ಅಪ್ಸರ್‌ಪಾಷ (ಪಕ್ಷೇತರ), ಎಂ.ಡಿ.ನೂರುಲ್ಲಾ (ಪಕ್ಷೇತರ)
ವಾರ್ಡ್ ೩೦ : ಗಾಯಿತ್ರಿ.ಪಿ (ಕಾಂಗ್ರೆಸ್), ಮಂಜುಳ.ಸಿ (ಬಿ.ಜೆ.ಪಿ), ಇ.ರೂಪ (ಜೆಡಿಎಸ್)
ವಾರ್ಡ್ ೩೧ : ಭಾಸ್ಕರ್ (ಬಿ.ಜೆ.ಪಿ), ಎ. ವಿ. ಶ್ರೀನಾಥ್ (ಜೆಡಿಎಸ್), ಎಂ. ಶ್ರೀನಿವಾಸ (ಕಾಂಗ್ರೆಸ್)
- Advertisement -
- Advertisement -
- Advertisement -