
Melur, Sidlaghatta Taluk, Chikkaballapur District : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಶ್ರೀ ಬತ್ತೇಶ್ವರಸ್ವಾಮಿ ದೇವಾಲಯ ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ಬತ್ತೇಶ್ವರಸ್ವಾಮಿ ಕುಲಬಂಧುಗಳ ಆರಾಧ್ಯ ಕ್ಷೇತ್ರ. ಪ್ರತಿ ವರ್ಷ ನಡೆಯುವ ಜಾತ್ರಾ ಮಹೋತ್ಸವಕ್ಕೆ ಕರ್ನಾಟಕದ ನಾನಾ ಭಾಗಗಳಿಂದ ಕುಲಬಂಧುಗಳು ಕುಟುಂಬ ಸಮೇತರಾಗಿ ಆಗಮಿಸುತ್ತಾರೆ.
ಜಾತ್ರೆಯ ವಿಶೇಷತೆಗಳು
ಜಾತ್ರೆಯ ಸಂದರ್ಭದಲ್ಲಿ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು ತಲೆಯ ಮೇಲೆ ತಂಬಿಟ್ಟು ದೀಪಗಳನ್ನು ಹೊತ್ತುಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತಿಪೂರ್ವಕ ಪ್ರದಕ್ಷಿಣೆ ಹಾಕುತ್ತಾರೆ. ಡೊಳ್ಳು ಕುಣಿತ, ಗಾರುಡಿಗೊಂಬೆ, ಕರಡಿ ವೇಷದಂತಹ ಜಾನಪದ ಕಲಾ ಪ್ರಕಾರಗಳು ಜಾತ್ರೆಗೆ ಜೀವಂತಿಕೆ ತುಂಬುತ್ತವೆ. ಹಾಲುಮತ ಸಮುದಾಯದ ಸಂಪ್ರದಾಯದಂತೆ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ವಿಶಿಷ್ಟ ಪವಾಡ ಕಾರ್ಯವೂ ನಡೆಯುತ್ತದೆ. ಬತ್ತೇಶ್ವರಸ್ವಾಮಿ ದೇವಾಲಯದ ಜೊತೆಗೆ ಗ್ರಾಮದ ಶ್ರೀಗಂಗಮ್ಮದೇವಿ ದೇವಾಲಯದಲ್ಲೂ ವಿಶೇಷ ಪೂಜೆ ನಡೆಯುತ್ತದೆ.
ದಾರಿ ಹೇಗೆ ಸಾಗುವುದು?
ಗೂಗಲ್ ಮ್ಯಾಪ್‌ನಲ್ಲಿ ದಾರಿ ವೀಕ್ಷಿಸಿ / Get Directions on Google Maps
In English: Sri Batteshwara Swamy Temple in Melur village is a clan (kulabandhu) deity site drawing devotee families from across Karnataka for its annual jatra festival, featuring the Tambittu lamp procession by women, folk performances like Dollu Kunitha, and a distinctive coconut-breaking ritual practiced by the Halumatha community.












