ಸಣ್ಣಪುಟ್ಟ ಕೆಲಸಕ್ಕೆ ಕಚೇರಿ ಅಲೆದಾಟ ತಪ್ಪಿಸಲು ಪ್ರಜಾಸೇವಾ ಆಂದೋಲನ: ಶನಿವಾರ ಗ್ರಾಮ ಒನ್ ಕೌಂಟರ್‌ನಲ್ಲಿ ಉಚಿತ ಆನ್‌ಲೈನ್ ಅರ್ಜಿ

Tahsildar Gagana Sindhu with former panchayat president, revenue inspector, panchayat development officer, headmaster, local leaders and staff in front of the Government High School building where the Prajaseva Andolana will be held

Sidlaghatta : ಜನಸಾಮಾನ್ಯರು ಸಣ್ಣಪುಟ್ಟ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಆಡಳಿತವನ್ನೇ ಜನರ ಬಳಿಗೆ ತರುವುದು ಪ್ರಜಾಸೇವಾ ಆಂದೋಲನದ ಮುಖ್ಯ ಉದ್ದೇಶ ಎಂದು ತಹಶೀಲ್ದಾರ್ ಕುಮಾರಿ ಎನ್. ಗಗನ ಸಿಂಧು ಹೇಳಿದರು.

ಬಶೆಟ್ಟಹಳ್ಳಿ ಹೋಬಳಿಯ ಗಂಜಿಗುಂಟೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದ ಅವರು, ಗ್ರಾಮ ಪಂಚಾಯಿತಿ ಮಟ್ಟದ ಪ್ರಜಾಸೇವಾ ಆಂದೋಲನ ನವೆಂಬರ್ 14ರ ಶನಿವಾರ ಗಂಜಿಗುಂಟೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶಾಸಕ ಬಿ.ಎನ್. ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಗ್ರಾಮ ಒನ್ ಕೌಂಟರ್‌ನಲ್ಲಿ ಉಚಿತ ಅರ್ಜಿ

ಸಾರ್ವಜನಿಕರ ಅನುಕೂಲಕ್ಕಾಗಿ ಸಭೆಯ ಆವರಣದಲ್ಲಿ ‘ಗ್ರಾಮ ಒನ್’ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಯಾವುದೇ ಶುಲ್ಕ ಇಲ್ಲದೆ ಅರ್ಜಿಗಳನ್ನು ಉಚಿತವಾಗಿ ಆನ್‌ಲೈನ್ ಮೂಲಕ ನೋಂದಾಯಿಸಲಾಗುತ್ತದೆ. ಸಭೆಯಲ್ಲಿ ಸ್ವೀಕರಿಸುವ ಅರ್ಜಿಗಳ ವಿವರವನ್ನು ತಕ್ಷಣ ಅಪ್‌ಲೋಡ್ ಮಾಡಿ ಸ್ವೀಕೃತಿ ನೀಡಲಾಗುತ್ತದೆ.

ಒಂದೇ ಸೂರಿನಡಿ ಅಧಿಕಾರಿಗಳು

ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಒಂದೇ ಸೂರಿನಡಿ ಲಭ್ಯವಿದ್ದು, ಸಾರ್ವಜನಿಕರ ದೂರು ಮತ್ತು ಅಹವಾಲುಗಳನ್ನು ನೇರವಾಗಿ ಸ್ವೀಕರಿಸಿ ಪರಿಹಾರ ಒದಗಿಸುತ್ತಾರೆ. ಯಾವುದೇ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಹವಾಲು ಸಲ್ಲಿಸಬೇಕು ಎಂದು ತಹಶೀಲ್ದಾರ್ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗಂಜಿಗುಂಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ನರಸಿಂಹಮೂರ್ತಿ, ಬಶೆಟ್ಟಹಳ್ಳಿ ಹೋಬಳಿ ರಾಜಸ್ವ ನಿರೀಕ್ಷಕ ಅಮರೇಂದ್ರ, ಪಿಡಿಒ ಶ್ರೀಕಾಂತ್ ಎ.ಸಿ., ಶಾಲೆಯ ಮುಖ್ಯೋಪಾಧ್ಯಾಯ ಓಬಳಪ್ಪ, ಮುಖಂಡ ಬೈರಾರೆಡ್ಡಿ, ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

ಸಂಬಂಧಿತ ಸುದ್ದಿ: ಪ್ರಜಾಸೇವಾ ಆಂದೋಲನ: ಮುಂದಿನ ಶನಿವಾರದೊಳಗೆ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಶಾಸಕರ ಗಡುವು | ನಿಮ್ಮ ಕುಂದುಕೊರತೆ ನೇರವಾಗಿ ಅಧಿಕಾರಿಗಳಿಗೆ ಹೇಳಬೇಕೆ? ನ.7ರ ಜನಸ್ಪಂದನಕ್ಕೆ ಬನ್ನಿ

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ