Home Places ಗಂಜಿಗುಂಟೆಯ ಚಂದ್ರಮೌಳೀಶ್ವರ ದೇವಸ್ಥಾನ | Ganjigunte Chandramouleshwara Temple

ಗಂಜಿಗುಂಟೆಯ ಚಂದ್ರಮೌಳೀಶ್ವರ ದೇವಸ್ಥಾನ | Ganjigunte Chandramouleshwara Temple

0
0
Ganjigunte Chandramouleshwara Temple ancient Scriptures

Ganjigunte, Sidlaghatta Taluk, Chikkaballapur District : ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ಚಂದ್ರಮೌಳೀಶ್ವರ ದೇವಸ್ಥಾನದ ಒಳಭಾಗದ ಮೇಲ್ಚಾವಣೆಯ ತೊಲೆಯ ಮೇಲೆ ಸಂಸ್ಕೃತ ಭಾಷೆಯ ಕನ್ನಡ ಲಿಪಿಯ ಅಪರೂಪದ ಶಾಸನವಿದೆ. ಶಾಸನತಜ್ಞ ಕೆ.ಧನಪಾಲ್ ಪ್ರಕಾರ, ಸಾಂಕೇತಿಕ ಕಾಲಗಣನೆ (ಧಾರ್ಮಿಕ/ಸಾಂಸ್ಕೃತಿಕ ಸಂಕೇತಗಳ ಆಧಾರದ ಮೇಲೆ ಕಾಲ ಅಳೆಯುವ ವಿಧಾನ) ಬಳಸಿರುವ ಅವಿಭಜಿತ ಜಿಲ್ಲೆಗಳ ಏಕೈಕ ಶಾಸನ ಇದು.

ಶಾಸನದಲ್ಲಿ ಏನಿದೆ?

ಶಕ 1695, ವಿಜಯ ಸಂವತ್ಸರ, ಕಾರ್ತಿಕ ಶುದ್ಧ ದಶಮಿ ಸೋಮವಾರ (ಕ್ರಿ.ಶ. 1773, ಅಕ್ಟೋಬರ್ 25) ದಂದು ಕೆತ್ತಲಾದ ಈ ಶಾಸನದ ಪ್ರಕಾರ, ಗಂಜಿಗುಂಟೆ ಗ್ರಾಮದ ಭಾರದ್ವಾಜ ಗೋತ್ರದ ಪುರೋಹಿತ ಕುಟುಂಬದ ನಾಲ್ಕನೇ ತಲೆಮಾರಿನ ಮಹಾಪಂಡಿತ ಹಾಗೂ ಕವಿ ರಾಮಕೃಷ್ಣಶಾಸ್ತ್ರೀಯು ದೇವಾಲಯ ಮತ್ತು ಮಂಟಪವನ್ನು ನಿರ್ಮಿಸಿ, ಚಂದ್ರಮೌಳೇಶ್ವರ, ದುರ್ಗಾ, ಗಣೇಶ, ಚಂಡಿಕೇಶ್ವರ, ಭೈರವ, ವೀರಭದ್ರ ಮತ್ತು ನಂದಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದನೆಂಬ ವಿವರವಿದೆ. ನಾಲ್ಕು ತಲೆಮಾರುಗಳ ಹೆಸರಿರುವ ಈ ಶಾಸನ, ಅಂದಿನ ಕಾಲದಲ್ಲಿ ಗಂಜಿಗುಂಟೆ ವಿದ್ವಾಂಸರಿದ್ದ ಸ್ಥಳ ಎಂಬುದನ್ನು ದೃಢಪಡಿಸುತ್ತದೆ.

ದಾರಿ ಹೇಗೆ ಸಾಗುವುದು?

ಗೂಗಲ್ ಮ್ಯಾಪ್‌ನಲ್ಲಿ ದಾರಿ ವೀಕ್ಷಿಸಿ / Get Directions on Google Maps

In English: Ganjigunte’s Chandramouleshwara Temple houses a rare Sanskrit-language inscription (in Kannada script) on its ceiling beam, dated October 25, 1773 CE, describing a four-generation priestly family that built the temple and consecrated its Chandramouleshwara, Durga, Ganesha, Chandikeshwara, Bhairava, Veerabhadra, and Nandi idols. Epigraphists note it uses a rare symbolic (rather than numeral) dating convention, unique among inscriptions found across the erstwhile undivided district.

Sidlaghatta WhatsApp Channel Group

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!