ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಲಾಗಿದ್ದ ಸ್ಕೌಟ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್‌ರ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಶಿಕ್ಷಕ ಸಿ.ಬಿ.ಪ್ರಕಾಶ್ ಮಾತನಾಡಿದರು.
ಮಕ್ಕಳಲ್ಲಿ ಶಿಸ್ತು ಹಾಗೂ ಸಹನೆ ರೂಡಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯುತ್ತಮ ವೇದಿಕೆಯಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿಯೂ ಸ್ಕೌಟ್ಸ್ ಅಂಡ್ ಗೈಡ್ಸ್ ಘಟಕ ಸ್ಥಾಪಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಶಿಕ್ಷಕರಿಗೆ ತರಬೇತಿ ನೀಡಲು ಒಂದು ವಾರದ ಕಾಲ ಶಿಬಿರ ಆಯೋಜಿಸಿದ್ದು ಶಿಬಿರದಲ್ಲಿ ಪಠ್ಯಕ್ಕನುಗುಣವಾಗಿ ಕೌಶಲ್ಯ ಹಾಗೂ ಚಟುವಟಿಕೆಗಳನ್ನು ಕಲಿಸಲಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ನಾಟಿಂಗ್ಸ್, ಗಂಟು ಹಾಕುವುದು, ಧ್ವಜ ಹಾರಿಸುವುದು ಹಾಗೂ ಇಳಿಸುವುದು ಮುಖ್ಯವಾಗಿ ಪ್ರಥಮ ಚಿಕಿತ್ಸೆ ಹೇಗೆ ಮಾಡಬೇಕು ಎನ್ನುವುದನ್ನು ಕಲಿಸಲಾಗಿದೆ ಎಂದರು.
ಶಿಬಿರದಲ್ಲಿ ಸುಮಾರು ೩೩ ಶಿಕ್ಷಕಿಯರು ಸೇರಿದಂತೆ ೩೧ ಶಿಕ್ಷಕರು ಪಾಲ್ಗೊಂಡು ತರಬೇತಿ ಪಡೆದುಕೊಂಡರು.
ತರಬೇತಿ ನಾಯಕಿ ಚಾಯಾ, ತರಬೇತಿ ಸಹಾಯಕ ಡಿ.ಎಸ್.ಮನೋಹರ್, ಶಿಕ್ಷಕರಾದ ನಾಗಲಿಂಗಪ್ಪ, ವಿಜಯ್‌ಕುಮಾರ್, ವಿನಯ್‌ಕುಮಾರ್, ಅರುಣ್‌ಕುಮಾರ್, ಅಕ್ಕಯ್ಯಮ್ಮ, ಗೌರಮ್ಮ, ನಾಗಲಕ್ಷ್ಮಿ, ತಿಮ್ಮರಾಜು ಹಾಜರಿದ್ದರು.
- Advertisement -
- Advertisement -
- Advertisement -