20.6 C
Sidlaghatta
Tuesday, July 15, 2025

ಹಳೆಯ ಮರವೊಂದನ್ನು ರಾತ್ರೋ ರಾತ್ರಿ ಕತ್ತರಿಸಿರುವ ದುಷ್ಕರ್ಮಿಗಳು

- Advertisement -
- Advertisement -

ನಗರದ ಬಸ್ ನಿಲ್ದಾಣದ ಬಳಿ ಹಳೆಯ ಮರವೊಂದನ್ನು ರಾತ್ರೋ ರಾತ್ರಿ ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಈ ಬಗ್ಗೆ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುಮಾರು ಮುವ್ವತ್ತು ವರ್ಷಗಳಿಂದ ಈ ಮರ ನೆರಳು ನೀಡುತ್ತಿತ್ತು. ಕೆಲವು ಜನಪ್ರತಿನಿಧಿಗಳ ಸಹಕಾರದಿಂದ ಸೇರಿ ಈ ಸ್ಥಳವನ್ನು ಆಕ್ರಮಿಸುವ ಹುನ್ನಾರದಿಂದ ಹಳೆಯ ಮರವನ್ನು ರಾತ್ರಿ ಕತ್ತರಿಸಿದ್ದಾರೆ. ಎಲ್ಲೆಡೆ ಪರಿಸರ ಉಳಿಸಿ, ಮರ ಬೆಳೆಸಿ ಎಂದು ಆಂದೋಲನ ನಡೆಸಿದ್ದರೆ, ನಮ್ಮಲ್ಲಿ ಜನನಿಬಿಡ ಪ್ರದೇಶದಲ್ಲಿ ಬಸ್ ನಿಲ್ದಾಣದ ಬಳಿ ಮರವನ್ನು ಕಡಿದರೂ ಇದುವರೆಗೂ ಅರಣ್ಯ ಇಲಾಖೆಯವರಾಗಲೀ ಅಥವಾ ನಗರಸಭೆಯವರಾಗಲೀ ಕ್ರಮ ಕೈಗೊಂಡಿಲ್ಲ. ಈ ಸ್ಥಳವನ್ನು ಆಕ್ರಮಿಸಲು ನಡೆಸಿರುವ ಹುನ್ನಾರವಿದು ಎಂದು ಸ್ಥಳೀಯ ಆಟೋ ಚಾಲಕರು, ವ್ಯಾಪಾರ ವಹಿವಾಟು ನಡೆಸುವವರು ದೂರಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಅಪ್ಪು, ನಾರಾಯಣಸ್ವಾಮಿ, ಶಂಕರ, ರಾಜು, ಪ್ರಕಾಶ್, ಶಿವಣ್ಣ, ಅಶ್ವತ್ ಹಾಜರಿದ್ದರು.
 

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!