ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಬಗ್ಗೆ ಅಧಿಕಾರಿಗಳು ಚೆನ್ನಾಗಿ ತಿಳಿದುಕೊಂಡರೆ ಸಾಮಾನ್ಯ ಜನರಿಗೆ ತಲುಪಿಸಲು ಅನುಕೂಲವಾಗುತ್ತದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳು ಕಾಲ ಕಾಲಕ್ಕೆ ಗ್ರಾಮಸಭೆ ನಡೆಸುವುದು ಮತ್ತು ಬ್ಯಾನರ್, ಪೋಸ್ಟರ್‌ಗಳ ಮೂಲಕ ಸರ್ಕಾರದ ಯೋಜನೆಗಳ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್ ತಿಳಿಸಿದರು.
ಕೇಂದ್ರ ಸರ್ಕಾರದ ಪುರಸ್ಕೃತ ಗ್ರಾಮ ಸ್ವರಾಜ್ ಯೋಜನೆಯಡಿ ಆಯ್ಕೆಯಾಗಿರುವ ತಾಲ್ಲೂಕಿನ ಗೊರಮಡುಗು ಗ್ರಾಮಕ್ಕೆ ಶುಕ್ರವಾರ ಅನುಷ್ಠಾನದ ವೀಕ್ಷಣೆಗಾಗಿ ಆಗಮಿಸಿದ್ದ ಕೇಂದ್ರದ ಕೃಷಿ ಮಂತ್ರಾಲಯದ ಅಧೀನ ಕಾರ್ಯದರ್ಶಿ ಟಿ.ಎ.ಕಂದನ್ ಮತ್ತು ತಂಡದವರನ್ನು ಬರಮಾಡಿಕೊಂಡು ಅವರು ಮಾತನಾಡಿದರು.
ತಾಲ್ಲೂಕಿನ ಗೊರಮಡುಗು ಗ್ರಾಮದಲ್ಲಿ ಈಗಾಗಲೇ ಪರಿಶಿಷ್ಠ ಜಾತಿ ಹಾಗು ಪಂಗಡಕ್ಕೆ ಸೇರಿದ ಎಲ್ಲಾ ಕುಟುಂಬಗಳಿಗೂ ಅಡುಗೆ ಅನಿಲದ ಸಂಪರ್ಕವಿದ್ದು ಸಾಮಾನ್ಯ ವರ್ಗದ ಕಲೆ ಮನೆಗಳಲ್ಲಿ ಇಲ್ಲದೇ ಇರುವುದರಿಂದ ಗ್ರಾಮ ಪಂಚಾಯಿತಿಯಿಂದ ಸಹಕಾರ ನೀಡುವಂತೆ ಮನವಿ ಮಾಡಿದರು.
ಈಗಾಗಲೇ ಗ್ರಾಮಸ್ಥರು ಬಹುತೇಕ ಮಂದಿ ಜನಧನ್ ಖಾತೆ ಹೊಂದಿದ್ದಾರೆ. ಗ್ರಾಮದ ಕೆಲವೆಡೆ ಬೀದಿ ದೀಪಗಳ ಅವಶ್ಯಕತೆಯಿರುವುದರಿಂದ ಕೂಡಲೇ ಬೆಸ್ಕಾಂ ಇಲಾಖೆಯವರು ಬೀದಿ ದ್ವೀಪಗಳನ್ನು ಅಳವಡಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಬೆಸ್ಕಾಂ ಅಧಿಕಾರಿ ಅನ್ಸರ್‌ಬಾಷ, ಗಮ ಪಂಚಾಯಿತಿ ಕಾರ್ಯದರ್ಶಿ ಅಶ್ವತ್ಥಪ್ಪ, ಮುಖಂಡರಾದ ಕೃಷ್ಣಪ್ಪ, ರವಿ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







