19 C
Sidlaghatta
Sunday, October 12, 2025

‘ಶಿಡ್ಲಘಟ್ಟ ಸಿನಿಮಾ ಹಬ್ಬ’ – ಶಿಡ್ಲಘಟ್ಟದಲ್ಲಿ ಸಿನೆಮಾ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ

- Advertisement -
- Advertisement -

ಬೆಳಕಿನ ಬಾಣ ಬಿರುಸುಗಳ ನಡುವೆ ತೂರಿ ಬಂದ ಕಲಾವಿದರು ನೃತ್ಯ ಮಾಡುತ್ತಿದ್ದರೆ, ನೆರೆದಿದ್ದ ಅಪಾರ ಜನಸ್ತೋಮ ಮಾಂತ್ರಿಕ ಲೋಕವನ್ನು ನೋಡಿದಂತೆ ಬೆರಗಾಗಿದ್ದರು. ‘ನೂರಕ್ಕೆ ನೂರು ಕನ್ನಡದವನು…’ ಎಂಬ ಹಾಡಿಗೆ ನವನಟ ಅನೂಪ್ ಹೆಜ್ಜೆ ಹಾಕಿದಾಗ ಸಾವಿರಾರು ಜನರ ಚಪ್ಪಾಳೆ, ಶಿಳ್ಳೆ, ಹರ್ಷೋದ್ಗಾರ ಮುಗಿಲುಮುಟ್ಟಿತ್ತು.
ಕ್ರೇಜಿ ಸ್ಟಾರ್ ರವಿಚಂದ್ರನ್, ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ, ಸುಧಾರಾಣಿ ಮುಂತಾದ ಚಲನಚಿತ್ರ ತಾರೆಯರನ್ನು ಕಂಡು ಶಿಡ್ಲಘಟ್ಟದ ಜನರು ಸಂತಸ ವ್ಯಕ್ತಪಡಿಸಿದರು.

ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ‘ಶಿಡ್ಲಘಟ್ಟ ಸಿನಿಮಾ ಹಬ್ಬ’ ಕಾರ್ಯಕ್ರಮವನ್ನು ಸಂಸದ ಕೆ.ಎಚ್.ಮುನಿಯಪ್ಪ, ಸಚಿವ ರೇವಣಸಿದ್ದಯ್ಯ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಚಿತ್ರದ ನಿರ್ಮಾಪಕಿ ವತ್ಸಲಾ ರೇವಣ್ಣ, ಶಾಸಕ ಎಂ.ರಾಜಣ್ಣ ಉದ್ಘಾಟಿಸಿದರು.
ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ‘ಶಿಡ್ಲಘಟ್ಟ ಸಿನಿಮಾ ಹಬ್ಬ’ ಕಾರ್ಯಕ್ರಮವನ್ನು ಸಂಸದ ಕೆ.ಎಚ್.ಮುನಿಯಪ್ಪ, ಸಚಿವ ರೇವಣಸಿದ್ದಯ್ಯ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಚಿತ್ರದ ನಿರ್ಮಾಪಕಿ ವತ್ಸಲಾ ರೇವಣ್ಣ, ಶಾಸಕ ಎಂ.ರಾಜಣ್ಣ ಉದ್ಘಾಟಿಸಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ‘ಶಿಡ್ಲಘಟ್ಟ ಸಿನಿಮಾ ಹಬ್ಬ’ ಶೀರ್ಷಿಕೆಯಡಿ ಲಕ್ಷ್ಮಣ ಸಿನೆಮಾದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಾಗಿ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಕ್ರೀಡಾಂಗಣದಲ್ಲಿ ಹಾಜರಿದ್ದರು. ಸುತ್ತಮುತ್ತಲಿನ ಕಟ್ಟಡಗಳ ಮೇಲೆಲ್ಲಾ ಜನರು ಹತ್ತಿ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಿದರು.
‘ಮಾಜಿ ಸಚಿವ ಎಚ್. ಎಂ.ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ ಅಭಿನಯದ ಚೊಚ್ಚಲ ಸಿನಿಮಾ ‘ಲಕ್ಷ್ಮಣ’
ಅರ್ಜುನ್ ಜನ್ಯ ಮ್ಯೂಸಿಕಲ್ ಲೈಟ್ಸ್ ತಂಡದಿಂದ ಏರ್ಪಡಿಸಿದ್ದ ರಸಸಂಜೆ ಕಾರ್ಯಕ್ರಮ
ಅರ್ಜುನ್ ಜನ್ಯ ಮ್ಯೂಸಿಕಲ್ ಲೈಟ್ಸ್ ತಂಡದಿಂದ ಏರ್ಪಡಿಸಿದ್ದ ರಸಸಂಜೆ ಕಾರ್ಯಕ್ರಮ

ಚಿತ್ರದ ಹಾಡುಗಳನ್ನು ನನ್ನ ಹುಟ್ಟೂರಿನಲ್ಲಿ, ಅದರಲ್ಲೂ ನಾನು ಆಡಿ ಬೆಳೆದ ಕ್ರೀಡಾಂಗಣದಲ್ಲೇ ಅದ್ದೂರಿಯಾಗಿ ಲೊಕಾರ್ಪಣೆ ಮಾಡುತ್ತಿರುವುದು ಸಂತಸ ತಂದಿದೆ. ನನ್ನ ಜನರಿಗಾಗಿ ಚಿತ್ರರಂಗದ ತಾರೆಯರನ್ನು ಕರೆತಂದಿದ್ದೇನೆ. ನಾನು ಈದಿನ ಈ ಸ್ಥಿತಿಗೆ ಏರಲು ನನ್ನ ಊರಿನ ಜನರ ಹಾರೈಕೆಯೇ ಕಾರಣ’ ಎಂದು ನಿರ್ದೇಶಕ ಆರ್.ಚಂದ್ರು ಭಾವುಕರಾಗಿ ನುಡಿದರು.
ಅರ್ಜುನ್ ಜನ್ಯ ಮ್ಯೂಸಿಕಲ್ ಲೈಟ್ಸ್ ತಂಡದಿಂದ ಏರ್ಪಡಿಸಿದ್ದ ರಸಸಂಜೆ ಕಾರ್ಯಕ್ರಮ, ನಟಿ ಸಂಜನಾ ಅವರ ನೃತ್ಯ, ಮಿಮಿಕ್ರಿ ದಯಾನಂದ್ ಅವರ ಹಾಸ್ಯ, ನಿರೂಪಕಿ ಅನೂಶ್ರೀ ಹಾಸ್ಯಮಿಶ್ರಿತ ನಿರೂಪಣೆ, ಲೇಸರ್ ಶೋ, ರೋಬೋ ನೃತ್ಯ ಮುಂತಾದ ಮನರಂಜನೆಗಳು ರಾತ್ರಿ 11 ಗಂಟೆಯಾದರೂ ಸಾವಿರಾರು ಜನರನ್ನು ಸೆರೆಹಿಡಿಯಲು ಸಫಲವಾಗಿತ್ತು.
ಕ್ರೇಜಿ ಸ್ಟಾರ್ ರವಿಚಂದ್ರನ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಚಿತ್ರದ ನಿರ್ಮಾಪಕಿ ವತ್ಸಲಾ ರೇವಣ್ಣ, ಶಾಸಕರಾದ ಡಾ.ಸುಧಾಕರ್, ಎಂ.ರಾಜಣ್ಣ, ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ ‘ಲಕ್ಷ್ಮಣ’
ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಮಾಡಿದರು.
ಅರ್ಜುನ್ ಜನ್ಯ ಮ್ಯೂಸಿಕಲ್ ಲೈಟ್ಸ್ ತಂಡದಿಂದ ಏರ್ಪಡಿಸಿದ್ದ ರಸಸಂಜೆ ಕಾರ್ಯಕ್ರಮ
ಅರ್ಜುನ್ ಜನ್ಯ ಮ್ಯೂಸಿಕಲ್ ಲೈಟ್ಸ್ ತಂಡದಿಂದ ಏರ್ಪಡಿಸಿದ್ದ ರಸಸಂಜೆ ಕಾರ್ಯಕ್ರಮ

ಈ ಸಂದರ್ಭದಲ್ಲಿ ‘ಲಕ್ಷ್ಮಣ’ ಚಿತ್ರದ ನಿರ್ದೇಶಕ ಆರ್.ಚಂದ್ರು ಅವರನ್ನು ಅವರು ವಿದ್ಯಾಭ್ಯಾಸ ಮಾಡಿದ್ದ ಸರಸ್ವತಿ ಕಾನ್ವೆಂಟ್ ಶಾಲೆಗಳ ವತಿಯಿಂದ ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷೆ ಸೀತಾಲಕ್ಷ್ಮಿ ಮತ್ತು ಕಾರ್ಯದರ್ಶಿ ಶ್ರೀಕಾಂತ್ ‘ಶಿಡ್ಲಘಟ್ಟ ರತ್ನ’ ಎಂಬ ಬಿರುದನ್ನು ನೀಡಿ ಗೌರವಿಸಿದರು.
ಸಂಸದ ಕೆ.ಎಚ್.ಮುನಿಯಪ್ಪ, ಸಚಿವ ರೇವಣಸಿದ್ದಯ್ಯ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್, ಫಿಲಂ ಚೇಂಬರ್ ಅಧ್ಯಕ್ಷ ಚಂದ್ರಶೇಖರ್, ಕೆ.ಎಂ.ನಾಗರಾಜು, ಕಾಂಗ್ರೆಸ್ ಮುಖಂಡ ಉಗ್ರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!