Melur, Sidlaghatta Taluk : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ 1976ರ SSLC ಸುವರ್ಣ ಮಹೋತ್ಸವ ಬ್ಯಾಚ್ ವತಿಯಿಂದ 2025–26ನೇ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 1976ರ ಬ್ಯಾಚ್‌ನ 50ನೇ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯಾರಿಗೆ ಎಷ್ಟು ಬಹುಮಾನ?
ಎಂ.ಎ. ಪವನ (ಪ್ರಥಮ), ಎನ್. ಶ್ರಾವ್ಯ (ದ್ವಿತೀಯ) ಹಾಗೂ ಎಂ. ವರ್ಷಿಣಿ (ತೃತೀಯ) ಸ್ಥಾನ ಪಡೆದಿದ್ದು, ಕ್ರಮವಾಗಿ ₹10,000, ₹8,000 ಹಾಗೂ ₹7,000 ನಗದು ಬಹುಮಾನ ನೀಡಲಾಯಿತು.
ಸುವರ್ಣ ಮಹೋತ್ಸವ ಬ್ಯಾಚ್‌ನ ಎಚ್.ಆರ್. ನಾಗೇಶ್, ಎಂ.ಟಿ. ಮಂಜುನಾಥ್, ಮುನೇಗೌಡ, ಟಿ.ಆರ್. ನಾರಾಯಣಸ್ವಾಮಿ, ಕೃಷ್ಣಾಚಾರಿ, ಎಚ್. ನಾರಾಯಣಸ್ವಾಮಿ, ಮುನಿರೆಡ್ಡಿ, ಎಸ್.ವಿ. ರವಿಚಂದ್ರ, ಎಂ.ಎಸ್. ರಮೇಶ್, ಸರೋಜಮ್ಮ, ವರಲಕ್ಷ್ಮಮ್ಮ, ಎಂ.ಬಿ. ನಾಗರಾಜ್, ಲಕ್ಷ್ಮೀನಾರಾಯಣ ಹಾಗೂ ಕೆ.ವಿ. ವೆಂಕಟೇಶ್ ಉಪಸ್ಥಿತರಿದ್ದರು.
In English: The 1976 SSLC batch of Melur’s government primary school marked their 50th reunion by felicitating this year’s top SSLC scorers from the same school: M.A. Pavana (1st), N. Shravya (2nd), and M. Varshini (3rd), who received cash prizes of ₹10,000, ₹8,000, and ₹7,000 respectively.
ಮೇಲೂರಿನ ಇತರ ಶಾಲಾ ಚಟುವಟಿಕೆಗಳ ಬಗ್ಗೆ ಮೇಲೂರಿನಲ್ಲಿ ಕಲಿಕಾ ಹಬ್ಬದ ಸಡಗರ ವರದಿಯನ್ನೂ ನೋಡಿ.








