ಶಿಡ್ಲಘಟ್ಟದ ಪ್ರತಿಭೆಗಳಿಂದ ಹೊಸ ಪಾಪ್ ಆಲ್ಬಮ್ ಹಾಡು

- Advertisement -
- Advertisement -

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಗಡಿನಾಡುಹುಲಿ ಪುನೀತ್ ಮಾತನಾಡಿ ತಾಲ್ಲೂಕಿನ ಗ್ರಾಮೀಣ ಭಾಗದ ಯುವ ಪ್ರತಿಭೆಗಳು ಒಗ್ಗೂಡಿ “2020 ಹುಡುಗಿ” ಎಂಬ ಪಾಪ್ ಆಲ್ಬಮ್ ಹಾಡನ್ನು ನಿರ್ಮಿಸಿದ್ದು ಶನಿವಾರ ಆನ್ ಲೈನ್ ನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ಕೊರೊನಾ ಸಂಕಷ್ಟದಲ್ಲಿಯೂ ಯುವ ಪ್ರತಿಭೆಗಳನ್ನು ಒಗ್ಗೂಡಿಸಿಕೊಂಡು, ನಾವುಗಳೇ ಹಣವನ್ನು ಖರ್ಚು ಮಾಡಿ ಈಗಿನ ಕಾಲಕ್ಕೆ ತಕ್ಕಹಾಗೆ ಯುವಪೀಳಿಗೆಯನ್ನು ಆಕರ್ಷಿಸುವ ಹಾಗೆ ಪಾಪ್ ಆಲ್ಬಮ್ ಹಾಡನ್ನು ನಿರ್ಮಿಸಿದ್ದೇವೆ. ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಇದನ್ನು ನಿರ್ಮಿಸಿದ್ದು, ಶನಿವಾರ ಕನ್ನಡದ್ದನ್ನು ಬಿಡುಗಡೆ ಮಾಡಲಿದ್ದೇವೆ. ಹದಿನೈದು ದಿನಗಳ ನಂತರ ತೆಲುಗು ಭಾಷೆಯನ್ನು ಬಿಡುಗಡೆ ಮಾಡಲಿದ್ದೇವೆ. ಕೆಲ ಸಮಯದ ನಂತರ ಹಿಂದಿಯದ್ದನ್ನೂ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

2020 ರಲ್ಲಿ ಯುವತಿಯ ಮನಸ್ಥಿಯನ್ನು ನಮ್ಮ ಪಾಪ್ ಆಲ್ಬಮ್ ಹಾಡು ಪ್ರತಿನಿಧಿಸುತ್ತದೆ. ಸಂಗೀತವನ್ನು ಧನುಶ್ ನೀಡಿದ್ದರೆ, ಧನುಶ್ರೀ ಸತೀಶ್ ಹಾಡನ್ನು ಹಾಡಿದ್ದಾರೆ. ಸಿರಿ ಮ್ಯೂಸಿಕ್ ಕಂಪೆನಿ ನಮ್ಮ ಹಾಡನ್ನು ಖರೀದಿಸಿದ್ದು, ಶನಿವಾರ ಬಿಡುಗಡೆ ಮಾಡಲಿದೆ. ನಗರ ಕೇಂದ್ರಿತವಾದ ಈ ರೀತಿಯ ಪಾಪ್ ಆಲ್ಬಮ್ ಹಾಡನ್ನು ಅಪ್ಪಟ ಗ್ರಾಮೀಣ ಪ್ರತಿಭೆಗಳೇ ನಿರ್ಮಿಸಿರುವುದರಿಂದ ಪ್ರೋತ್ಸಾಹದ ಅಗತ್ಯವಿದೆ ಎಂದರು.

 ಪಾಪ್ ಆಲ್ಬಮ್ ಹಾಡಿನ ತಂಡದ ಸಂತೋಷ್ ಮತ್ತು ಗಣೇಶ್ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!