Home News ಶಿಡ್ಲಘಟ್ಟದ ಕಲಾವಿದನಿಗೆ “ಅಂಕಿತ ಪುಸ್ತಕ ಬಹುಮಾನ”

ಶಿಡ್ಲಘಟ್ಟದ ಕಲಾವಿದನಿಗೆ “ಅಂಕಿತ ಪುಸ್ತಕ ಬಹುಮಾನ”

0
Sidlaghatta Ajith Koundinya Cover page Artist Ankita Award

Sidlaghatta : ಶಿಡ್ಲಘಟ್ಟ ನಗರದ ಹೌಸಿಂಗ್ ಬೋರ್ಡ್ ನಿವಾಸಿ ಮುಖಪುಟ ಚಿತ್ರ ಕಲಾವಿದ ಅಜಿತ್ ಕೌಂಡಿನ್ಯ ಅವರಿಗೆ “ಅಂಕಿತ ಪುಸ್ತಕ ಬಹುಮಾನ” ಲಭಿಸಿದೆ.

ಅಂಕಿತ ಪುಸ್ತಕ ಪ್ರಕಾಶನವು ಮುಖಪುಟ ವಿನ್ಯಾಸ ಸ್ಪರ್ಧೆಯ ಫಲಿತಾಂಶ ಘೋಷಿಸಿದ್ದು, ಅಜಿತ್ ಕೌಂಡಿನ್ಯ ಸೇರಿದಂತೆ ನಾಲ್ವರು ಕಲಾವಿದರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಳೆದ ಜುಲೈ 28 ರಂದು ಅಂಕಿತ ಪ್ರಕಾಶನವು “ಹಸ್ತಿನಾವತಿ” ಕಾದಂಬರಿ ಮುಖಪುಟ ರಚನೆಯ ಸ್ಪರ್ಧೆ ಘೋಷಿಸಿತ್ತು. ಈ ಸ್ಪರ್ಧೆಯಲ್ಲಿ 16 ಕಲಾವಿದರು ಭಾಗವಹಿಸಿದ್ದರು. ಕಲಾವಿದ ಹಾಗೂ ಮುಖಪುಟ ವಿನ್ಯಾಸಗಾರ ಸುಧಾಕರ ದರ್ಬೆ ಅವರು ನಾಲ್ಕು ಮುಖಪುಟಗಳನ್ನು ಆಯ್ಕೆ ಮಾಡಿದ್ದಾರೆ.

ಬಹುಮಾನವು ತಲಾ 5 ಸಾವಿರ ರೂ ನಗದು ಒಳಗೊಂಡಿದೆ. 2023 ರ ಫೆಬ್ರುವರಿ 19 ರಂದು “ಹಸ್ತಿನಾವತಿ” ಕಾದಂಬರಿ ಬಿಡುಗಡೆಯಾಗಲಿದ್ದು, ಅದೇ ಸಮಾರಂಭದಲ್ಲಿ ಬಹುಮಾನ ಪ್ರಧಾನ ಮಾಡಲಾಗುವುದು ಎಂದು ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version