Home News ಕೇಬಲ್ ಕಳ್ಳತನ

ಕೇಬಲ್ ಕಳ್ಳತನ

0
Anur Grama Panchayat Japti Hosahalli cable Theft

ಶಿಡ್ಲಘಟ್ಟ ತಾಲ್ಲೂಕಿನ ಅನೂರು ಗ್ರಾಮ ಪಂಚಾಯಿತಿಯ ಜಪ್ತಿಹೊಸಹಳ್ಳಿ ಬಳಿ ಗ್ರಾಮ ಪಂಚಾಯಿತಿಯ ಕೊಳವೆಬಾವಿಯ ಶೆಡ್ ನಲ್ಲಿ  ಕೇಬಲ್ ಕಳ್ಳತನ ಮಾಡಲಾಗಿದೆ.

 ಚೀಮಂಗಲ ರಸ್ತೆಯಲ್ಲಿನ ಜಪ್ತಿ ಹೊಸಹಳ್ಳಿ ಗೇಟ್ ಬಳಿ ಇರುವ ಎರಡು ಕೊಳವೆ ಬಾವಿ ಶೆಡ್ ಬಳಿ ಶುಕ್ರವಾರ ರಾತ್ರಿ ಕೇಬಲ್ ಕಳ್ಳತನ ಮಾಡಲಾಗಿದೆ. ಆನೂರು ಗ್ರಾಮ ಪಂಚಾಯಿತಿಗೆ ಸೇರಿದ ಜಪ್ತಿಹೊಸಹಳ್ಳಿ ಹಾಗೂ ಡಬರಗಾನಹಳ್ಳಿ ಎರಡೂ ಗ್ರಾಮಗಳಿಗೆ ಸೇರಿದ ಈ ಕೊಳವೆ ಬಾವಿಗಳು ಎರಡು ಗ್ರಾಮಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿದ್ದವು. ಈಗ ಎರಡು ಊರಿನ ಗ್ರಾಮಸ್ಥರು ನೀರಿಲ್ಲದೆ ಪರದಾಡುವಂತಾಗಿದೆ. ಈ ಹಿಂದೆಯೂ ಸಹ ಒಂದು ಬಾರಿ ಕೇಬಲ್ ಕಳ್ಳತನವಾಗಿತ್ತು, ಮತ್ತೆ ಎರಡನೇ ಬಾರಿ ಈ ಘಟನೆ ನಡೆದಿದೆ ಎನ್ನುತ್ತಾರೆ ಗ್ರಾಮಸ್ಥರು. ಅನೂರು ಗ್ರಾಮ ಪಂಚಾಯಿತಿಯಿಂದ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version