ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾರದಾ ಪೂಜೆ ಮತ್ತು ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶಿಲ್ಪಾ, ಸದಸ್ಯೆಯರಾದ ಪುಷ್ಪ, ಭಾಗ್ಯಶ್ರಿ, ಪ್ರೇಮಾ, ಮುನಿರತ್ನಮ್ಮ ಹಾಗೂ ಇತರೆ ಮಕ್ಕಳ ತಾಯಂದಿರು ಶಾಲೆಗೆ ಆಗಮಿಸಿ ಮಕ್ಕಳಿಗೆಲ್ಲಾ ಒಬ್ಬಟ್ಟನ್ನು ತಯಾರಿಸಿದರು. ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ, ಜೊತೆಯಲ್ಲಿ ಚಾಕೋಲೇಟ್ ಸಹ ಹಂಚಿದರು.
ಏಳನೇ ತರಗತಿ ಪಾಸ್ ಮಾಡಿ ಶಾಲೆ ಬಿಟ್ಟು ಹೋಗುವ ಮಕ್ಕಳಿಗೆ ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಮತ್ತು ಶಿಕ್ಷಕ ಚಾಂದ್ ಪಾಷ, ಭವಿಷ್ಯದ ಓದು, ಸನ್ನಡತೆ, ಗುರಿ, ಅವಕಾಶಗಳ ಬಗ್ಗೆ ವಿವರಿಸಿದರು.
ಶಿಕ್ಷಕರಾದ ಎಂ.ಸುಜಾತ, ಎಂ.ಭಾರತಿ, ಸಿಬ್ಬಂದಿ ವೆಂಕಟಮ್ಮ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಹಾಜರಿದ್ದರು.