News

ಅಟಲ್ ಭೂ ಜಲ್ ಯೋಜನೆಯಡಿ ಅವಳಿ ಜಿಲ್ಲೆಗಳಿಗೆ 200 ಕೋಟಿ ರೂ

Atal Land Development Scheme Sidlaghatta Muniswamy

ಶಿಡ್ಲಘಟ್ಟ ತಾಲ್ಲೂಕು ಹಂಡಿಗನಾಳದಲ್ಲಿ ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲ್ಲೂಕು ವ್ಯಾಪ್ತಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಅಟಲ್ ಭೂ ಜಲ್ ಯೋಜನೆಯ ಅನುಷ್ಠಾನದ ಕಾರ‍್ಯಾಗಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು.

ಅಂತರ್ಜಲ ಹೆಚ್ಚಿಸಲು ಎಲ್ಲರ ಸಹಕಾರ ಅತ್ಯಗತ್ಯ. ಎಲ್ಲೆಡೆ ಗೋಮಾಳಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಬೇಕು.  ಕೇಂದ್ರ ಸರ್ಕಾರದ ಅಟಲ್ ಭೂ ಜಲ್ ಯೋಜನೆಯಡಿ 1200 ಕೋಟಿ ರೂಗಳು ಬಿಡುಗಡೆಯಾಗಿದ್ದು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 200 ಕೋಟಿ ರೂ ಅನುದಾನ ಬಂದಿದ್ದು ಇದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಸುವರ್ಣ ಅವಕಾಶ ನಮ್ಮೆಲ್ಲರಿಗೂ ದೊರೆತಿದೆ ಎಂದು ಅವರು ತಿಳಿಸಿದರು.

ನರೇಗಾ ಜತೆಗೆ ಈ ಯೋಜನೆಯು ಈ ಎರಡೂ ಜಿಲ್ಲೆಗಳಿಗೆ ವರದಾನವಾಗಲಿದ್ದು ಅಧಿಕಾರಿಗಳು ಜನಪ್ರತಿ ನಿಧಿಗಳು ಪ್ರಾಮಾಣಿಕವಾಗಿ ಕಾರ‍್ಯನಿರ್ವಹಿಸಬೇಕಿದೆ ಎಂದು ಹೇಳಿದರು.

ಮಳೆಗಾಲದಲ್ಲಿ ಜನಪ್ರತಿನಿಧಿಗಳು ಮನೆಯಲ್ಲಿ ಕೂರದೆ ಸುತ್ತಾಡಿದಾಗ ಎಲ್ಲೆಲ್ಲಿ ಮಳೆ ನೀರು ಹರಿಯುತ್ತಿದೆ ಎಲ್ಲಿ ಸಂರಕ್ಷಣೆ ಮಾಡಿ ಇಂಗಿಸಬೇಕೆಂಬುದು ಗೊತ್ತಾಗಲಿದ್ದು ಅಧಿಕಾರಿಗಳೊಂದಿಗೆ ಸೇರಿ ಕಾರ‍್ಯರೂಪಿಸಬೇಕಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ‍್ಯದರ್ಶಿ ಶಿವಕುಮಾರ್ ಮಾತನಾಡಿ, ಅಟಲ್ ಭೂ ಜಲ್ ಯೋಜನೆಯ ಉದ್ದೇಶವನ್ನು ವಿವರಿಸಿ ನೀರಿನ ಮೂಲಗಳನ್ನು ಅಥವಾ ಅಂತರ್ಜಲವನ್ನು ಅದರ ಸ್ವರೂಪ ಬದಲಿಸದೆ ಮಲಿನಗೊಳಿಸದೆ ಸದ್ಬಳಕೆ ಮಾಡಿಕೊಳ್ಳುವುದು. ನಾವು ಬಳಸಿಕೊಂಡು ನಮ್ಮ ಮುಂದಿನ ಪೀಳಿಗೆಗೂ ಉಳಿಸಿಕೊಳ್ಳುವ ಮೂಲಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.

ಶಾಸಕ ವಿ.ಮುನಿಯಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಕೇಂದ್ರ ಅಂತರ್ಜಲ ಮಂಡಳಿಯ ವಿಜ್ಞಾನಿ ಆನಂದ್, ಬೋರಪ್ಪ, ಶ್ರೀಧರ್, ಕೃಷಿ ಉಪ ನಿರ್ದೆಶಕಿ ಅನುರೂಪ, ತಹಸೀಲ್ದಾರ್ ರಾಜೀವ್, ಇಒ ಚಂದ್ರಕಾಂತ್, ವೆಡ್ ಸಂಸ್ಥೆಯ ಸೌಮ್ಯ ಹಾಜರಿದ್ದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

Sidlaghatta Urge MP S Muniswamy for public apology

News

ಮಾಜಿ ಸಂಸದ ಎಸ್.ಮುನಿಸ್ವಾಮಿ ಬಹಿರಂಗ ಕ್ಷಮೆ ಯಾಚಿಸಬೇಕು

https://youtu.be/YAKf0SoSQ0s Sidlaghatta : ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮುಸ್ಲಿಂ ಸಮುದಾಯದ ಹಿರಿಯ ನಾಯಕ ನಜೀರ್ ಅಹ್ಮದ್ ರನ್ನು ಟೆರರಿಸ್ಟ್ ಎಂದು ಕರೆದಿರುವ ಕೋಲಾರದ ಮಾಜಿ…

Share
BJP District President Sikal Ramachandra Gowda

News

ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಮೇಲೆ FIR ದಾಖಲಿಸಿ ಬಂಧಿಸಬೇಕು: ಎಸ್. ಮುನಿಸ್ವಾಮಿ

Sidlaghatta : "ಕಾನೂನು ಅಥವಾ ಪೊಲೀಸರು ಹಾಕುವ ದಂಡಕ್ಕೆ ಹೆದರಿ ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದಲ್ಲ. ನಮ್ಮ ರಕ್ಷಣೆ ಮತ್ತು ನಮ್ಮ ಮೇಲೆ ಅವಲಂಬಿತವಾಗಿರುವ…

Share
Sidlaghatta BJP JDS Election Alliance Meeting

News

JDS ಎಲ್ಲಿದೆ ಎನ್ನುವ ಮುಖ್ಯಮಂತ್ರಿಗಳಿಗೆ ಫಲಿತಾಂಶದ ದಿನ ಉತ್ತರ ಸಿಗುತ್ತದೆ

Sidlaghatta : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು JDS ಎಲ್ಲಿದೆ? ಜೆಡಿಎಸ್ ಎಲ್ಲಿದೆ? ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ಕೋಲಾರ ಸಂಸತ್ ಕ್ಷೇತ್ರದಲ್ಲಿ BJP JDS…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.