Sidlaghatta : ಬಿಜೆಪಿಯ ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ ಮಾ.19 ರ ಭಾನುವಾರ ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿನ ಬಿಜೆಪಿಯ ಸೇವಾ ಸೌಧದಲ್ಲಿ ನಡೆಯಲಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿಯೂ ಆದ ಡಾ.ಪದ್ಮಪ್ರಕಾಶ್ ತಿಳಿಸಿದರು.
ನಗರದ ಮಯೂರ ವೃತ್ತದಲ್ಲಿನ ಬಿಜೆಪಿಯ ಸೇವಾ ಸೌಧದಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದಲೂ ಸುಮಾರು 2 ಸಾವಿರ ಮಹಿಳಾ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಅಂದು ಬೆಳಗ್ಗೆ 11 ಗಂಟೆಗೆ ಸಮಾವೇಶ ಆರಂಭವಾಗಲಿದ್ದು ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಸೇರಿದಂತೆ ಬಿಜೆಪಿಯ ಪ್ರಮುಖರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೇಂದ್ರದಲ್ಲಿನ ಮೋದಿ ನೇತೃತ್ವದ ಹಾಗೂ ರಾಜ್ಯದಲ್ಲಿನ ಬೊಮ್ಮಾಯಿ ನೇತೃತ್ವದ ಸರಕಾರದ ಸಾಧನೆಗಳನ್ನು ಸಮಾವೇಶದಲ್ಲಿ ಸಾರಲಾಗುವುದು ಎಂದು ಹೇಳಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಬಿಜೆಪಿಯ ನಾನಾ ಘಟಕಗಳ ಸಮಾವೇಶಗಳನ್ನು ನಡೆಸುತ್ತಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಮಹಿಳಾ ಸಮಾವೇಶವನ್ನು ಶಿಡ್ಲಘಟ್ಟದಲ್ಲಿ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರೇಗೌಡ ಅವರು ಸೇರಿದಂತೆ ಇತರೆ ಮುಖಂಡರ ಸಹಕಾರದಲ್ಲಿ ನಡೆಸಲಾಗುತ್ತದೆ ಎಂದು ವಿವರಿಸಿದರು.
ಸಮಾವೇಶಗಳ ಮೂಲಕ ಬಿಜೆಪಿ ಪಕ್ಷ ಹಾಗೂ ಸರ್ಕಾರದ ಸಾಧನೆಗಳನ್ನು ಮನೆ ಮನೆಗೂ ತಲುಪಿಸುವ ಮತ್ತು ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಸಕ್ರೀಯರಾಗಿ ತೊಡಗಿಸಿಕೊಳ್ಳುವಂತೆ ಮಾಡುವುದೂ ಒಂದಾಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಶಿಡ್ಲಘಟ್ಟದಲ್ಲಿ ಜಿಲ್ಲಾ ಮಟ್ಟದ ಬಿಜೆಪಿ ಮಹಿಳಾ ಸಮಾವೇಶ ನಡೆಸಲು ಹೈ ಕಮಾಂಡ್ ನಿರ್ಧರಿಸಿರುವುದು ಸಂತಸದ ವಿಷಯ. ಸಮಾವೇಶ ನಡೆಸುವುದರಿಂದ ಇಲ್ಲಿ ನಮ್ಮ ಪಕ್ಷ ಇನ್ನಷ್ಟು ಸಂಘಟಿತವಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಹಿಳಾ ಸಮಾವೇಶಕ್ಕೆ ಅಗತ್ಯವಾದ ಎಲ್ಲ ರೀತಿಯ ಸಹಕಾರ ನೀಡಿ ಸಮಾವೇಶವನ್ನು ನಮ್ಮೆಲ್ಲರ ಮುಖಂಡರು ಸೇರಿ ಯಶಸ್ವಿ ಮಾಡುತ್ತೇವೆ ಎಂದು ತಿಳಿಸಿದರು.
ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಲೀಲಾ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ನರ್ಮದಾರೆಡ್ಡಿ, ತ್ರಿವೇಣಿ, ಕಮಲ, ಸುಜಾತಮ್ಮ, ಅಮೃತ, ಸರೋಜಮ್ಮ, ಸುರೇಂದ್ರಗೌಡ, ರಾಘವೇಂದ್ರ ಹಾಜರಿದ್ದರು.
BJP to Hold Chikkaballapur District-Level Women’s Conference in Sidlaghatta
Sidlaghatta : The Bharatiya Janata Party (BJP) is set to hold Chikkaballapur district level women’s conference in Sidlaghatta on Sunday, March 19th. The event will take place at the BJP Seva Soudha in Mayura Circle, Sidlaghatta town, according to Dr. Padma Prakash, the state secretary and district in-charge of BJP Mahila Morcha.
Around 2,000 women workers from all assembly constituencies of the district are expected to participate in the convention. The conference, which will commence at 11 am, will be attended by the state president of Mahila Morcha and other prominent BJP leaders as guests.
Dr. Padma Prakash stated that the conference will focus on highlighting the achievements of the Modi-led government at the center and the Bommai-led government in the state. He added that various units of the BJP are conducting meetings in all districts of the state, and the Chikkaballapur district women’s meeting will be held in Sidlaghatta in collaboration with BJP leader Seikal Ramachandre Gowda and other leaders.
According to Seikal Ramachandra Gowda, the decision to hold a district-level BJP women’s conference in Sidlaghatta is a matter of happiness for the party. He expressed his excitement that the convention will make the party more organised in the area.
The convention aims to convey the achievements of the BJP party and the government to the public, as well as encouraging women to participate more actively in politics. The conference is expected to receive necessary cooperation from all leaders to ensure its success.
Mahila Morcha District President Leela Srinivas, General Secretary Narmdareddy, Triveni, Kamala, Sujathamma, Amrita, Sarojamma, Surendra Gowda, Raghavendra were present at the press conference.