Home News ಚೀಮನಹಳ್ಳಿ ಗ್ರಾಮದಲ್ಲಿ ಪುನೀತ್ ಸ್ಮಾರಕ ನಿರ್ಮಾಣ

ಚೀಮನಹಳ್ಳಿ ಗ್ರಾಮದಲ್ಲಿ ಪುನೀತ್ ಸ್ಮಾರಕ ನಿರ್ಮಾಣ

0
Cheemanahalli Sidlaghatta Puneeth Rajkumar Memorial

Cheemanahalli, Sidlaghatta : ಕನ್ನಡ ಕೇವಲ ಭಾಷೆ ಮಾತ್ರವಲ್ಲ, ಅದು ನಮ್ಮ ಬದುಕು ಕೂಡ ಹೌದು. ಹಾಗಾಗಿ ಕನ್ನಡವನ್ನು ನಾವು ಬದುಕಾಗಿ ಬದಲಾವಣೆ ಮಾಡಿಕೊಂಡಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ವೈದ್ಯ ಡಾ.ಸತ್ಯನಾರಾಯಣರಾವ್ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಚೀಮನಹಳ್ಳಿ ಗ್ರಾಮದ ಅಪ್ಪು ಅಭಿಮಾನಿಗಳ ಬಳಗ ಮತ್ತು ಗ್ರಾಮಸ್ಥರಿಂದ ಭಾನುವಾರ 67 ನೇ ಕನ್ನಡ ರಾಜ್ಯೋತ್ಸವ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸವಿನೆನಪಿಗಾಗಿ ಸ್ಮಾರಕ ಹಾಗೂ ತಂಗುದಾಣ ಉದ್ಘಾಟನೆ ಸಮಾರಂಭದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಪರಂಪರೆ, ಶ್ರೀಮಂತಿಕೆಯನ್ನು ಯಾರೂ ಮರೆಯಬಾರದು. ನಮ್ಮ ಕನ್ನಡದ ಕಣ್ಮಣಿ ಅಪ್ಪು ಅವರ ಅಕಾಲಿಕ ಮರಣದಿಂದ ನಮ್ಮ ರಾಜ್ಯವೇ ಕಣ್ಣಿರಲ್ಲಿ ಮುಳುಗಿದೆ. ಮತ್ತೆ ಅಪ್ಪು ಅವರು ನಮ್ಮ ನಾಡಿನಲ್ಲಿ ಹುಟ್ಟಿ ಬರಲಿ, ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ಅವರಿಗಾಗಿ ಗಂಧದಗುಡಿ ನಿರ್ಮಾಣ ಮಾಡಿರುವುದು ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಸಿ.ಎಚ್.ಬಸವರಾಜ್, ಸಿ.ವಿ.ಮುನಿರಾಜ, ಸಿ.ಬಿ.ಕೊಂಡೇಗೌಡ, ಧನಂಜಯ್.ಸಿ, ಕೆ.ಮನೋಹರ್, ಸಿ.ಎನ್.ದೇವರಾಜ್, ಸಿ.ಎಂ.ಸುಧಾಕರ್, ಸಿ.ವಿ.ವಿನಯ್ ಕುಮಾರ್, ಮುನಿಕೃಷ್ಣ, ಶ್ರೀನಿವಾಸ್.ಸಿ ಬಿ.ಡಿ.ನಾರಾಯಣಸ್ವಾಮಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version