Sidlaghatta : ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ.
ಗ್ರಾಮದ ಕೃಷ್ಣಪ್ಪ ಮತ್ತು ನಾರಾಯಣಮ್ಮ ದಂಪತಿ ಕುರಿ ಮೇಯಿಸಲು ತೆರಳಿದ್ದ ಸಂದರ್ಭದಲ್ಲಿ ಬೆಳಿಗ್ಗೆ 9ರಿಂದ 10ರ ನಡುವೆ ಕಳ್ಳರು ಮನೆಯ ಬಾಗಿಲು ಮುರಿದು ಒಳನುಗ್ಗಿದ್ದಾರೆ ಎನ್ನಲಾಗಿದೆ. ಬಳಿಕ ಬೀರು ಒಡೆದು ಅದರಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸರ್ಕಲ್ ಇನ್‌ಸ್ಪೆಕ್ಟರ್ ಆನಂದ್ ಕುಮಾರ್, ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪಿ.ಎಸ್.ಐ ಸುನಿಲ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಬೆರಳಚ್ಚು ತಜ್ಞರು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
In English: Thieves broke into a house in broad daylight in Bodagooru village, Sidlaghatta taluk, on Monday, making off with gold jewellery, silverware, and cash while the residents, Krishnappa and Narayanamma, were out grazing sheep. According to the complaint, the burglars broke the door between 9 and 10 am, forced open a cupboard, and fled with the valuables. Circle Inspector Anand Kumar, Sidlaghatta Rural PSI Sunil Kumar and staff inspected the scene, along with a district fingerprint expert team. Villagers are alarmed by the incident, and police have registered a case and launched an investigation.
ಜಿಲ್ಲೆಯಲ್ಲಿ ಈ ಹಿಂದೆ ವರದಿಯಾಗಿದ್ದ ಇಂತಹುದೇ ಒಂದು ಪ್ರಕರಣದ ಬಗ್ಗೆ ಚಿಂದಿ ಪೇಪರ್ ಆಯುವ ನೆಪದಲ್ಲಿ ಮನೆ ಕಳ್ಳತನ, ಮಹಿಳೆಯರ ಬಂಧನ ಎಂಬ ವರದಿಯನ್ನೂ ಓದಿ.








