Home News ಸಾಲ ಭಾದೆ ತಾಳಲಾರದೆ ರೈತ ನೇಣಿಗೆ ಶರಣು

ಸಾಲ ಭಾದೆ ತಾಳಲಾರದೆ ರೈತ ನೇಣಿಗೆ ಶರಣು

0
Debt Farmer Death Sidlaghatta Malamachanahalli

Malamachanahalli, Sidlaghatta : ಸಾಲಬಾಧೆ ತಾಳಲಾರದೆ ನೇಣಿಗೆ ಶರಣಾಗಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ನಡೆದಿದೆ .

ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದ ವಿ.ವಿ.ಕೃಷ್ಣಪ್ಪ ಮೃತ ದುರ್ದೈವಿ ಎನ್ನಲಾಗಿದೆ.

ವಿ.ವಿ.ಕೃಷ್ಣಪ್ಪ ಕೃಷಿಕನಾಗಿದ್ದು ಕಷ್ಟದ ಸಮಯದಲ್ಲಿ ಕೈಸಾಲ, ಕೃಷಿ ಸಾಲ, ಮನೆಯ ಮೇಲೆ ಸಾಲ ಮಾಡಿಕೊಂಡಿದ್ದಾರೆ. ಸುಮಾರು 15 ರಿಂದ 20 ಲಕ್ಷ ಸಾಲ ಮಾಡಿದ್ದ ಇವರು ಸಾಲ ತೀರಿಸಲಾಗದೆ ಮುಗಿಲಡಪಿ ಗ್ರಾಮದ ಹೊರ ವಲಯದ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.

ಮೃತ ಕೃಷ್ಣಪ್ಪನಿಗೆ ಓರ್ವ ಪುತ್ರ ಹಾಗೂ ಪುತ್ರಿಯಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version