News

ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಡಿಜಿಟಲ್ ಲೈಬ್ರರಿ

Devaramallur Grama Panchayat Digital Library

ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿ ಕೇಂದ್ರಸ್ಥಾನದಲ್ಲಿ ಡಿಜಿಟಲ್ ಲೈಬ್ರರಿಯನ್ನು ನಿರ್ಮಾಣ ಮಾಡುತ್ತಿದ್ದು ಜಿಲ್ಲಾ ಪಂಚಾಯಿತಿ ಎಇಇ ರಮೇಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ತಂಡವು ಸೋಮವಾರ ಪರಿಶೀಲನೆ ನಡೆಸಿದರು.

ಓದುವ ಶಾಲಾ ಕಾಲೇಜು ಮಕ್ಕಳಿಂದ ಹಿರಿಯವರೆಗೂ ಮಹಿಳೆಯರು ಸೇರಿ ಎಲ್ಲ ವರ್ಗದವರಿಗೂ ಇಷ್ಟವಾಗುವ ಆಸಕ್ತಿ ಇರುವ ಎಲ್ಲ ರೀತಿಯ ಸಾಹಿತ್ಯವನ್ನು ಒದಗಿಸಲಾಗುವುದು, ಅದಕ್ಕೆ ಪೂರಕವಾದ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಎಇಇ ರಮೇಶ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿಯ ಅನಿರ್ಬಂಧಿತ ನಿಧಿಯಲ್ಲಿ 2.5 ಲಕ್ಷ ರೂ.ವೆಚ್ಚದಲ್ಲಿ ಡಿಜಿಟಲ್ ಲೈಬ್ರರಿ ನಿರ್ಮಾಣವಾಗುತ್ತಿದೆ. ಇಲ್ಲಿ ಟಿವಿ, ಕಂಪ್ಯೂಟರ್, ಇಂಟರ್‌ನೆಟ್, ವಿದ್ಯುತ್, ಕುಡಿಯುವ ನೀರು ಜತೆಗೆ ಓದಿಕೊಳ್ಳಲು ಪೂರಕವಾದ ವಾತಾವರಣವನ್ನು ಕಲ್ಪಿಸಲಾಗುತ್ತಿದೆ.

ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಟಿವಿಯನ್ನು ಬಳಸಿಕೊಳ್ಳಲಾಗುತ್ತದೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಐಎಎಸ್ ಕೆಎಎಸ್‌ನಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಪೂರಕವಾದ ಡಿಜಿಟಲ್ ಮಾದರಿ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ. ಗೋಡೆಗಳ ಮೇಲೆ ಚಿತ್ರಗಳು ಓದುಗ ಮಕ್ಕಳನ್ನು ಆಕರ್ಷಿಸುವಂತಿವೆ. ಮುಂದಿನ ತಿಂಗಳಲ್ಲಿ ಡಿಜಿಟಲ್ ಲೈಬ್ರರಿ ಲೋಕಾರ್ಪಣೆಗೊಳ್ಳಲಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಎಇಇ ರಮೇಶ್, ಎಂಜಿನಿಯರ್ ರವಿ, ಗ್ರಾಮಪಂಚಾಯಿತಿ ಸದಸ್ಯ ವೀರಾಪುರ ವೆಂಕಟೇಶ್, ಚಕ್ರವರ್ತಿ ಹಾಜರಿದ್ದರು.

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

ಸ್ವಂತ ಪ್ಯಾಕಿಂಗ್ ಘಟಕ ಇಲ್ಲದೆ ಚಿಮುಲ್‌ಗೆ ನಷ್ಟ: ನಿರ್ದೇಶಕ ಬಂಕ್ ಮುನಿಯಪ್ಪ

Place

ಸ್ವಂತ ಪ್ಯಾಕಿಂಗ್ ಘಟಕ ಇಲ್ಲದೆ ಚಿಮುಲ್‌ಗೆ ನಷ್ಟ: ನಿರ್ದೇಶಕ ಬಂಕ್ ಮುನಿಯಪ್ಪ

ದೇವರಮಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಚಿಮುಲ್‌ಗೆ ಸ್ವಂತ ಪ್ಯಾಕಿಂಗ್ ಘಟಕ ಇಲ್ಲದೆ ನಷ್ಟ ಎಂದ ನಿರ್ದೇಶಕ ಬಂಕ್ ಮುನಿಯಪ್ಪ; ₹80…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Devaramallur Sankranti Celebration

News

ದೇವರಮಳ್ಳೂರು ಗ್ರಾಮದಲ್ಲಿನ ವಿಶೇಷವಾಗಿ ಸುಗ್ಗಿಯ ಸಂಕ್ರಾಂತಿ ಆಚರಣೆ

https://youtu.be/ep7h4jyXpJE Devaramallur, Sidlaghatta : ದೇವರುಗಳ ತವರೂರು ಎಂದೇ ಐತಿಹಾಸಿಕವಾಗಿ ಪ್ರಸಿದ್ಧಿಯಾದ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ರೈತರು ಅತ್ಯಂತ ಸಡಗರ…

Share