ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಯುವಕನಿಗೆ ಆರ್ಥಿಕ ನೆರವು

- Advertisement -
- Advertisement -

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಯುವಕನಿಗೆ ಚಿಕಿತ್ಸೆಗಾಗಿ ಆರ್ಥಿಕ ನೆರವು ಹಾಗೂ ಮಾಶಾಸನವನ್ನು ಶನಿವಾರ ವಿತರಣೆ ಮಾಡಲಾಯಿತು.

 ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ಮತ್ತು ತಂದೆ ತಾಯಿ ಇಲ್ಲದ ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿಯ 20 ವರ್ಷದ ಯುವಕನಿಗೆ ರೂ 10 ಸಾವಿರ ಸಹಾಯಧನ ಹಾಗೂ ಯುವಕ ಜೀವನ ನಡೆಸಲು ಪ್ರತಿ ತಿಂಗಳು 750 ರೂಗಳಂತೆ ಮಾಶಾಸನವನ್ನು  ಮಂಜೂರುಗೊಳಿಸಲಾಗಿದೆ.

 ಶ್ರೀ ಕ್ಷೇತ್ರದಿಂದ ಮಂಜೂರುಗೊಳಿಸಿದ ಆರ್ಥಿಕ ನೆರವು ಹಾಗೂ ಮಾಸಾಶನವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಎಂ. ತ್ಯಾಗರಾಜ್ ವಿತರಿಸಿದರು. ಈ ಸಂಧರ್ಭದಲ್ಲಿ ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಮಂಜುನಾಥ್, ಮೇಲ್ವಿಚಾರಕಿ ಜ್ಯೋತಿ, ಸೇವಾಪ್ರತಿನಿಧಿ ಲಕ್ಷ್ಮಮ್ಮ, ಪದಾಧಿಕಾರಿ ಗೀತಾ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!