Home News ಮಕ್ಕಳು ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗದಂತೆ ಜಾಗೃತಿ ವಹಿಸಬೇಕು

ಮಕ್ಕಳು ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗದಂತೆ ಜಾಗೃತಿ ವಹಿಸಬೇಕು

0
Sidlaghatta Dolphins Public School Kala Samilana Event

Sidlaghatta : ಶಿಡ್ಲಘಟ್ಟ ನಗರದ ನಲ್ಲಿಮರದಹಳ್ಳಿ ರಸ್ತೆಯಲ್ಲಿರುವ ಡಾಲ್ಫಿನ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ಭಾನುವಾರ ರಾತ್ರಿ ನಡೆದ ಡಾಲ್ಫಿನ್ಸ್ ಕಲಾ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರು ಮಾತನಾಡಿದರು.

ಮಕ್ಕಳು ಅತ್ತರೆ ಪುಸ್ತಕ ಕೊಡುವಂತಹ ಕಾಲ ಇತ್ತು, ಈಗ ಮಕ್ಕಳು ಅತ್ತರೆ ಫೋನ್ ಕೊಡುವಂತಹ ಕಾಲ ಬಂದಿದೆ. ಓದಿನ ಕಡೆ ಮಕ್ಕಳು ಆಸಕ್ತಿ ಹೊಂದುವಂತೆ ಪೋಷಕರು ನೋಡಿಕೊಳ್ಳಬೇಕು. ಮಕ್ಕಳು ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗದಂತೆ ಜಾಗೃತಿ ವಹಿಸಬೇಕಾಗಿದೆ ಎಂದು ತಿಳಿಸಿದರು.

ಶಿಕ್ಷಣ ಎಂದರೆ ಕೇವಲ ಓದುವುದೇ ಅಲ್ಲ ಸರ್ವತೋಮುಖ ಅಭಿವೃದ್ಧಿಗೆ ಒತ್ತು ಕೊಟ್ಟಾಗ ಮಕ್ಕಳ ಭವಿಷ್ಯ ಸುಗಮವಾಗುತ್ತದೆ. ಅಭಿಪ್ರಾಯಪಟ್ಟರು. ಓದಿನಿಂದ ಸಾಕಷ್ಟು ಜ್ಞಾನ ಸಿಗುವುದರಿಂದ ಎಂತಹ ಸ್ಥಿತಿಯಲ್ಲಾದರೂ ವ್ಯಕ್ತಿ ಯಶಸ್ಸು ಅಥವಾ ಜಯವನ್ನು ಕಂಡುಕೊಳ್ಳುವನು. ಓದುವ ಹವ್ಯಾಸ ಅಥವಾ ಆಸಕ್ತಿಯು ವ್ಯಕ್ತಿಗೆ ಚಿಕ್ಕ ವಯಸ್ಸಿನಿಂದಲೇ ಬರಬೇಕು. ವ್ಯಕ್ತಿ ಬೆಳೆದಂತೆ ಬೇರೆ ಬೇರೆ ವಿಷಯಗಳ ಕಡೆಗೆ ಆಸಕ್ತಿಯನ್ನು ಪಡೆದುಕೊಳ್ಳುವನು. ಹಾಗಾಗಿ ಅವರು ಸಮಾಜ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತೆರೆದುಕೊಳ್ಳುವಾಗ ಓದುವ ಹವ್ಯಾಸವನ್ನು ಬೆಳೆಸಬೇಕು ಎಂದರು.

ಶಾಲೆಯ ಗ್ರಂಥಾಲಯಗಳು ಶೈಕ್ಷಣಿಕ ಸಂಸ್ಥೆಗಳ ಗರ್ಭಗುಡಿಯಿದ್ದಂತೆ. ಪ್ರತಿಯೊಬ್ಬ ವಿದ್ಯಾರ್ಥಿ ಕೂಡಾ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪುಸ್ತಕಗಳ ಸಾಂಗತ್ಯ ನಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯತ್ತದೆ ಎಂದರು.

ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳನ್ನು ಮುಖ್ಯ ಅತಿಥಿಗಳು ಹಾಗೂ ಪೋಷಕರು ನೋಡಿ ಆನಂದಿಸಿದರು.

ಡಾಲ್ಫಿನ್ಸ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಎ.ನಾಗರಾಜ್, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ವಿ.ಕೃಷ್ಣಪ್ಪ, ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್, ಆಡಳಿತಾಧಿಕಾರಿ ಬಿ.ಎಸ್. ಚಂದನ ಅಶೋಕ್, ಖಜಾಂಚಿ ರತ್ನಮ್ಮ, ಪ್ರಾಂಶುಪಾಲರಾದ ಸಂದೀಪ್ ಬನವಾಸಿ, ವರಲಕ್ಷಮ್ಮ, ಡಾ.ಜೆ.ಎ.ಸುದರ್ಶನ್, ಎನ್.ಮುನಿಶಾಮಪ್ಪ, ಆರಿಫ್ ಅಹಮದ್, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version