ಶಿಡ್ಲಘಟ್ಟ ನಗರದ ದ್ವಿಮುಖ ಗಣಪತಿ ದೇವಸ್ಥಾನದಲ್ಲಿ ಕಳ್ಳತನ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ಅಶೋಕ ರಸ್ತೆಯಲ್ಲಿ ಇರುವ ದ್ವಿಮುಖ ಗಣಪತಿ ದೇವಸ್ಥಾನದಲ್ಲಿ (Dwimukha Ganapathi Temple) ಮಂಗಳವಾರ ರಾತ್ರಿ ಕಳ್ಳರು ಹುಂಡಿ ಒಡೆದು ಹಣ ದೋಚಿದ್ದಾರೆ. ಕಳ್ಳರು ದೇವಾಲಯದ ಹುಂಡಿಯನ್ನು ಹೊಡೆದು ಹಣ ದೋಚಿ ಪಕ್ಕದ ಖಾಲಿ ನಿವೇಶನದಲ್ಲಿ ಖಾಲಿ ಹುಂಡಿಯನ್ನು ಬಿಸಾಡಿ ಹೋಗಿದ್ದಾರೆ.

ಬೆಳಗಿನ ಜಾವ ಹೊರಗಡೆ ಅರ್ಚಕರು ದೇವಸ್ಥಾನದ ಬಾಗಿಲಿಗೆ ಗೋಣಿಚೀಲ ಕಟ್ಟಿದ್ದರುವುದನ್ನು ಕಂಡು ಅನುಮಾನಗೊಂಡು ನೋಡಿದಾಗ ದೇವಸ್ಥಾನದ ಬಾಗಿಲಿಗೆ ಹಾಕಿರುವ ಬೀಗ ಮುರಿದಿರುವುದು ಕಂಡುಬಂದಿದೆ. ನಂತರ ಒಳಗೆ ಹೋಗಿ ನೋಡಿದರೆ ಹುಂಡಿಯನ್ನು ಹೊಡೆದಿರುವುದನ್ನು ನೋಡಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!