E Timmasandra, sidlagahatta : ತಾಲ್ಲೂಕಿನ ಈ. ತಿಮ್ಮಸಂದ್ರ ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ (PDO) ಸೇವೆ ಸಲ್ಲಿಸಿದ ತನ್ವೀರ್ ಅಹಮದ್ ಅವರಿಗೆ ಪಂಚಾಯತ್ ಮಂಡಳಿ ಹಾಗೂ ಗ್ರಾಮಸ್ಥರು ಸೇರಿ ಆತ್ಮೀಯವಾಗಿ ಬೀಳ್ಕೊಟ್ಟರು.
ತಮ್ಮ ಅವಧಿಯಲ್ಲಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಿದ ತನ್ವೀರ್ ಅಹಮದ್ ಅವರನ್ನು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, “ತನ್ವೀರ್ ಅಹಮದ್ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉತ್ತಮ ಅಧಿಕಾರಿಯಾಗಿದ್ದರು” ಎಂದು ಅವರ ಸೇವೆಯನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಶಿವಾರೆಡ್ಡಿ, ಮೊಲಸಾಬ್, ಸಮಿಉಲ್ಲಾ, ಬೈಲಾರೆಡ್ಡಿ, ರಾಜೇಶ್, ಚಲಪತಿ, ನಾರಾಯಣ ರೆಡ್ಡಿ, ಕೃಷ್ಣಪ್ಪ ಮತ್ತು ನರಸಿಂಹ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು ಹಾಗೂ ಒಕ್ಕೂಟದ ಸದಸ್ಯರು ಭಾಗವಹಿಸಿ ಪಿಡಿಒ ಅವರಿಗೆ ಶುಭ ಹಾರೈಸಿದರು.








