23.1 C
Sidlaghatta
Monday, August 15, 2022

ಗಾಂಧೀಜಿಯವರ ಕನಸನ್ನು ನನಸು ಮಾಡೋಣ – ತಹಶೀಲ್ದಾರ್ ಕೆ.ಆರುಂಧತಿ

- Advertisement -
- Advertisement -

ನಗರದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಗಾಂಧಿ ಜಯಂತಿ ಪ್ರಯುಕ್ತ  ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಹಶೀಲ್ದಾರ್ ಕೆ.ಆರುಂಧತಿ ಮಾತನಾಡಿದರು.

ಗಾಂಧಿಯವರ ಬದುಕೊಂದು ಶಾಂತಿ- ಹೋರಾಟಗಳ ಮಹಾಗಾಥೆ. ಸತ್ಯಕ್ಕಾಗಿ ನಿರಂತರ ಅನ್ವೇಷಣೆ ಎಂದು ಅವರು ತಿಳಿಸಿದರು.

 ಗಾಂಧಿಯವರು ಅಹಿಂಸೆಯ ಮೂಲಕವೇ ಹೋರಾಟದ ನೇತೃತ್ವ ವಹಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅವರ ಬದುಕು ಮತ್ತು ಹೋರಾಟ ನಮ್ಮೆಲ್ಲರಿಗೂ ಮಾದರಿ. ಸ್ವಚ್ಛತೆ, ಸ್ವಾವಲಂಬನೆಗಳ ಪ್ರತಿಪಾದಕರಾಗಿದ್ದ ಗಾಂಧೀಜಿಯವರ ಕನಸನ್ನು ನನಸು ಮಾಡುವ ಸಂಕಲ್ಪ ತೊಡೋಣ ಎಂದರು.

ಆಹಾರ ನಿರೀಕ್ಷಕಿ ಧನಲಕ್ಷ್ಮಿ , ನಾರಾಯಣಸ್ವಾಮಿ, ಪ್ರಶಾಂತ್, ಸೋಣ್ಣೆಗೌಡ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here