21.1 C
Sidlaghatta
Tuesday, July 5, 2022

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡುವಂತಿಲ್ಲ

- Advertisement -
- Advertisement -

ಶಿಡ್ಲಘಟ್ಟ ನಗರದ ತಾಲ್ಲೂಕು ಕಾರ‍್ಯಾಲಯದಲ್ಲಿ ನಡೆದ ಚಿಕ್ಕಬಳ್ಳಾಪುರ ಜಿಲ್ಲಾ ಎಸಿಬಿ ಪೊಲೀಸರ ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಜಿಲ್ಲಾ ಎಸಿಬಿ ಪೊಲೀಸ್ ಡಿವೈಎಸ್ಪಿ ಪ್ರವೀಣ್ ಮಾತನಾಡಿದರು.

ಸರ್ಕಾರದ ಯಾವುದೆ ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಸಾರ್ವಜನಿಕರ ಕೆಲಸ ಕಾರ‍್ಯಗಳನ್ನು ವಿನಾಕಾರಣ ವಿಳಂಬ ಮಾಡುವಂತಿಲ್ಲ, ಪ್ರತಿಯಾಗಿ ಪ್ರತಿಫಲವನ್ನು ಬಯಸುವಂತಿಲ್ಲ. ಸಾರ್ವಜನಿಕರು ಈ ರೀತಿಯ ಪ್ರಕರಣಗಳು ಕಂಡು ಬಂದರೆ ಧೈರ್ಯವಾಗಿ ನಮ್ಮಲ್ಲಿ ದೂರು ನೀಡಿ. ಕಾನೂನಿನ ಇತಿ ಮಿತಿಯಲ್ಲಿ ಸಾರ್ವಜನಿಕರ ಕೆಲಸ ಕಾರ‍್ಯಗಳನ್ನು, ಯೋಜನೆಗಳನ್ನು, ಸಾಲವನ್ನು, ರಿಯಾಯಿತಿಗಳನ್ನು ಪಡೆಯಲು ಲಂಚದ ಹಣಕ್ಕೆ ಬೇಡಿಕೆ ಇಡುವುದಷ್ಟೆ ತಪ್ಪಲ್ಲ. ಕೆಲಸಕ್ಕೆ ಪ್ರತಿಯಾಗಿ ಯಾವುದೆ ರೀತಿಯ ಪ್ರತಿಫಲವನ್ನು ಅಪೇಕ್ಷಿಸುವುದು ಸಹ ಅಪರಾಧವಾಗಿದೆ ಎಂದು ಅವರು ತಿಳಿಸಿದರು.

ಜತೆಗೆ ಸೂಕ್ತ ಉತ್ತರ ನೀಡದೆ ಕಾರಣ ಇಲ್ಲದೆ ವಿನಾಕಾರಣ ವಿಳಂಬ ಅಸಡ್ಡೆ ತೋರುವುದು ಸಹ ಸರಿಯಲ್ಲ. ಈ ಬಗ್ಗೆ ಜಿಲ್ಲಾ ಎಸಿಬಿ ಪೊಲೀಸರೊಂದಿಗೆ ಉಕ್ತವಾಗಿ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು, ಅಗತ್ಯ ಬಿದ್ದಾಗ ದೂರದಾರರ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತೇವೆ ಎಂದರು.

ಇದೆ ಮೊದಲ ಬಾರಿಗೆ ಎಸಿಬಿ ಪೊಲೀಸರನ್ನು ಹೊರತುಪಡಿಸಿ ಯಾವುದೆ ಇಲಾಖೆಯ ಅಧಿಕಾರಿಗಳನ್ನು ಸಿಬ್ಬಂದಿಯನ್ನು ಸಭೆಗೆ ಆಹ್ವಾನಿಸದೆ ಕೇವಲ ಸಾರ್ವಜನಿಕರನ್ನಷ್ಟೆ ಆಹ್ವಾನಿಸಿದ್ದು ವಿಶೇಷವಾಗಿತ್ತು. ವಿವಿದ ಇಲಾಖೆಗಳಿಗೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು.

ಸಿಪಿಐ ಹರೀಶ್‌ರೆಡ್ಡಿ, ರವಿಕುಮಾರ್, ಎಫ್‌ಡಿಎ ರವಿಶಂಕರ್, ಮಂಜುನಾಥ್, ಸಂತೋಷ್, ಮಂಜುಳ ಹಾಜರಿದ್ದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here