News

ಕೊರೊನಾದಿಂದ ನಿರುದ್ಯೋಗಿಗಳಾದವರಿಗೆ ಉದ್ಯೋಗದ ಭರವಸೆ

ABD Group Ration Kit Distribution at Hosapete Sidlaghatta Taluk

ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿ ಎಬಿಡಿ ಗ್ರೂಪ್ಸ್ ವತಿಯಿಂದ ಮನೆಮನೆಗೂ ದಿನಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಎಬಿಡಿ ಗ್ರೂಪ್ಸ್ ಅಧ್ಯಕ್ಷ ರಾಜೀವ್‌ಗೌಡ ಮಾತನಾಡಿದರು.

ಕೊರೊನಾ ಸಂಕಷ್ಟದಿಂದ ನಿರುದ್ಯೋಗಿಗಳಾಗಿರುವ ಯುವಕರಿಗೆ ಅವರವರ ಕೌಶಲ್ಯ ಹಾಗೂ ವಿದ್ಯಾರ್ಹತೆಗನುಗುಣವಾಗಿ ಉದ್ಯೋಗವನ್ನು ಎಬಿಡಿ ಗ್ರೂಪ್ಸ್ ಮೂಲಕ ಕೊಡಿಸಲಾಗುವುದು ಎಂದು ಅವರು ತಿಳಿಸಿದರು.

ಯಾರೂ ಸಹ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ತಾಲ್ಲೂಕಿನಾದ್ಯಂತ ಆಹಾರ ಧಾನ್ಯಗಳ ಕಿಟ್ ಗಳನ್ನು ಮನೆಮನೆಗೂ ವಿತರಿಸುವ ಯೋಜನೆಯನ್ನು ರೂಪಿಸಲಾಗಿದ್ದು, ಈಗಾಗಲೇ ಜಂಗಮಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಸಿ ಕಿಟ್ ವಿತರಣೆ ಸಮರ್ಪಕವಾಗಿ ನಡೆದಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರೆ ಕೊರೊನಾ ವಾರಿಯರ್ ಗಳಾಗಿ ಕೆಲಸ ಮಾಡುತ್ತಿರುವವರಿಗೂ ಸಹ ಪ್ರೋತ್ಸಾಹಕವಾಗಿ ದಿನಸಿ ಕಿಟ್ ನೀಡುತ್ತಿದ್ದೇವೆ ಎಂದು ಹೇಳಿದರು.

 ಗಿಡಗಳನ್ನು ನೆಡುವುದು ಅವನ್ನು ಕಾಪಾಡುವುದು ನಮ್ಮೆಲ್ಲರ ಅಭ್ಯ್ಸವಾಗಬೇಕು. ಮುಂದಿನ ದಿನಗಳಲ್ಲಿ ಎಬಿಡಿ ಸಂಸ್ಥೆ ವತಿಯಿಂದ ಗಿಡಗಳನ್ನು ಸಹ ನೀಡುತ್ತೇವೆ. ಪ್ರತಿಯೊಬ್ಬರೂ ಕನಿಷ್ಠ ನಾಲ್ಕು ವರ್ಷಗಳ ಕಾಲ ಒಂದು ಗಿಡವನ್ನು ಕಾಪಾಡಿಕೊಂಡಲ್ಲಿ ಮುಂದೆ ಅದೇ ನಮಗೆಲ್ಲಾ ಉತ್ತಮ ಆಮ್ಲಜನಕ ನೀಡುತ್ತದೆ. ಪಶು ಪಕ್ಷಿಗಳಿಗೆ ಆಹಾರ ಒದಗಿಸುತ್ತದೆ. ಹಸಿರನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

 ಹೊಸಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಜನರು ಕಷ್ಟದಲ್ಲಿರುವಾಗ ಅವರಿಗೆ ಎಬಿಡಿ ಸಂಸ್ಥೆ ವತಿಯಿಂದ ನೆರವು ನೀಡುತ್ತಿರುವುದು ಶ್ಲಾಘನೀಯ. ದೇಶವನ್ನು ಕೊರೊನಾ ಮುಕ್ತಗೊಳಿಸಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ. ಜನತೆ ಅನಾವಶ್ಯಕವಾಗಿ ಓಡಾಡದೇ ಸಹಕಾರ ನೀಡಬೇಕು. ಇನ್ನು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಎಲ್ಲರಿಗೂ ತಮ್ಮ ಕೈಲಾದ ಸಹಾಯ ಹಸ್ತ ಚಾಚುತ್ತಿರುವ ಸಮಾಜ ಸೇವಕರ ಕಾರ್ಯ ಅನುಕರಣೀಯ. ಜನತೆಗೆ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳುವಂತೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.

ಚಿತ್ರ ನಟ ಧನುಶ್, ಕೃಷ್ಣ, ಸುರೇಶ್, ಮಂಜುನಾಥ್, ಆಂಜಿನಯರೆಡ್ಡಿ, ಜಗದೀಶ್, ನಾರಾಯಣಸ್ವಾಮಿ, ಹರೀಶ್, ಮುನಿರಾಜ್(ಕುಟ್ಟಿ) ಚಂದ್ರಶೇಖರ್, ಸಂದೀಪ್, ದಿಲೀಪ್ ಹಾಜರಿದ್ದರು.

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

Sidlaghatta hosapete Grama Sabhe

News

PDO ವಿರುದ್ಧ ಆಕ್ರೋಶ: ಬಹುತೇಕ ದೂರಿನಲ್ಲೇ ಕಳೆದ ಹೊಸಪೇಟೆ ಗ್ರಾಮ ಸಭೆ

Hosapete, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ, ಕೈಗೊಂಡ ಮತ್ತು ಕೈಗೊಳ್ಳಬೇಕಾದ ಅಭಿವೃದ್ಧಿ…

Share
Sidlaghatta Hosapete Gangadevi Temple Rejuvenation

News

ಗಂಗಾದೇವಿ ದೇವಾಲಯದ ಪುನರ್ ಪ್ರತಿಷ್ಟಾಪನೆ

Hosapete, Sidlaghatta : ಹಳ್ಳಿಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ದೇವತಾ ಕಾರ್ಯಗಳನ್ನು ನಡೆಸಿ ಜನರನ್ನು ಒಗ್ಗೂಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ಅಭಿಪ್ರಾಯಪಟ್ಟರು.…

Share
Sidlaghatta Govt School Teacher Rekha rani Shikshaka Ratna Award

News

ಸರ್ಕಾರಿ ಶಾಲಾ ಶಿಕ್ಷಕಿ ಕೆ.ಎನ್. ರೇಖಾರಾಣಿಗೆ ರಾಜ್ಯಮಟ್ಟದ “ಶಿಕ್ಷಕ ರತ್ನ” ಪ್ರಶಸ್ತಿ

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ.ಎನ್. ರೇಖಾರಾಣಿ ಅವರು ರಾಜ್ಯಮಟ್ಟದ “ಶಿಕ್ಷಕ ರತ್ನ” ಪ್ರಶಸ್ತಿಗೆ ಭಾಜನರಾಗಿದ್ದಾರೆ.…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Sidlaghatta Hosapete Sericulture Farmers Awareness Programme

News

ನನ್ನ ರೇಷ್ಮೆ ನನ್ನ ಹೆಮ್ಮೆ ಜಾಗೃತಿ ಕಾರ್ಯಕ್ರಮ

Hosapete, Sidlaghatta : ದ್ವಿತಳಿ ರೇಷ್ಮೆಗೂಡು ಉತ್ಪಾದನೆ ಮಾಡುವ ಕಡೆಗೆ ರೈತರು ಹೆಚ್ಚಿನ ಚಿಂತನೆ ನಡೆಸಬೇಕು. ಇದರಿಂದ ರೈತರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ ಎಂದು…

Share