Home News ಮಕ್ಕಳ ಶಿಕ್ಷಣದಲ್ಲಿ ಮನೆಯ ಪರಿಸರದ ಮಹತ್ವ ದೊಡ್ಡದು

ಮಕ್ಕಳ ಶಿಕ್ಷಣದಲ್ಲಿ ಮನೆಯ ಪರಿಸರದ ಮಹತ್ವ ದೊಡ್ಡದು

0
Sri Mangalanath Swamiji speaking at a program emphasizing the importance of home environment in children's education at swasthi mata pitru vandana program organized at BGS Public School sidlaghatta

Sidlaghatta : ಹಿರಿಯರನ್ನು ಗೌರವಿಸುವ, ಕಲಿಯುವ, ತಿಳಿಯುವ ಗುಣ ಮಕ್ಕಳಿಗೆ ಕಲಿಸಿ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರೊಂದಿಗೆ ಓದಲು ಒಳ್ಳೆಯ ವಾತಾವರಣವನ್ನು ಮನೆಯಲ್ಲಿ ಸೃಷ್ಠಿಸಿಕೊಡಬೇಕು. ಮನೆಯೇ ಮೊದಲ ಪಾಠಶಾಲೆ ಎಂಬ ಹಿರಿಯರ ಮಾತಿನಂತೆ ಮಗುವಿನ ಶಿಕ್ಷಣ ಮನೆಯಿಂದಲೇ ಆರಂಭವಾಗುತ್ತದೆ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಹೇಳಿದರು.

ಶಿಡ್ಲಘಟ್ಟ ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯುಕೆಜಿ ಮಕ್ಕಳ ಗ್ರಾಜುಯೇಷನ್ ಡೇ (ಪದವಿ ಪ್ರಧಾನ) ಹಾಗೂ “ಸ್ವಸ್ತಿ” ಎಂಬ ಮಾತಾ ಪಿತೃ ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತವೆ. ಹಾಗಾಗಿ ಉತ್ತಮ ನಡತೆ, ಆಚಾರ, ವಿಚಾರ ಮುಂತಾದ ಸಂಗತಿಗಳು ಸಿಗುವ ಹಾಗೆ ನೋಡಿಕೊಳ್ಳಬೇಕು. ಬಾಲ್ಯದಲ್ಲಿ ಕಲಿತದ್ದು ಕಟ್ಟಡಕ್ಕೆ ಅಡಿಪಾಯದಂತೆ ಜೀವನದಲ್ಲಿ ಭವಿಷ್ಯಕ್ಕೆ ನೆರವಾಗುತ್ತದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ, ಮೌಲ್ಯಗಳನ್ನು ಕಲಿಸಬೇಕು. ಮನೆಯಲ್ಲಿ ದೂರದರ್ಶನ ಮಕ್ಕಳಿಗೆ ಜ್ಞಾನಾರ್ಜನೆಗೆ ಪೂರಕವಾಗಿರಲಿ. ಅವರು ದಾರಿತಪ್ಪುವಷ್ಟು ಅದನ್ನು ನೋಡದಿರಲಿ ಎಂದು ತಿಳಿಹೇಳಿದರು.

ತಹಶೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ, ತಾಯಿ ತಂದೆಗಿಂತ ಮಿಗಿಲಾದ ದೇವರಿಲ್ಲ, ಪ್ರತಿಯೊಬ್ಬ ಮಗುವೂ ತಾಯಿ ತಂದೆಯರನ್ನು ಗೌರವಿಸುವುದನ್ನು ರೂಡಿಸಿಕೊಳ್ಳಬೇಕು. ಹಾಗೆಯೇ ಪೋಷಕರು ಸಹ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಹನೆಯನ್ನು ಕಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪುಠಾಣಿ ಮಕ್ಕಳು ತಮ್ಮ ಮುದ್ದು ಮಾತಿನಲ್ಲಿ ನಿರೂಪಣೆ, ವಿವರಣೆ, ಪರಿಚಯ ಮತ್ತು ವಂದನೆ ನುಡಿಗಳನ್ನು ಹೇಳಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಶಾಲೆಗೆ ತಂದೆ ತಾಯಿಯನ್ನು ಕರೆ ತಂದಿದ್ದ ಪುಟಾಣಿ ಮಕ್ಕಳು ಅವರನ್ನು ಖುರ್ಚಿ ಮೇಲೆ ಕೂಡಿಸಿ ತಾಯಿ ತಂದೆಯರ ಪಾದ ತೊಳೆದು ಪುಷ್ಪ ಸಮರ್ಪಿಸಿ ನಮಸ್ಕರಿಸಿದರು. ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಂದ ನಿರೂಪಣೆ ಹಾಗೂ ಪದವಿ ಪ್ರಧಾನದ ಪ್ರತಿಜ್ಞಾ ಬೋಧನೆ ಮತ್ತಿತರ ಚಟುವಟಿಕೆಗಳು ವಿಶೇಷವಾಗಿತ್ತು.

ನರ್ಸರಿ ವ್ಯಾಸಂಗ ಪೂರ್ಣಗೊಳಿಸಿದ ಯುಕೆಜಿ ಮಕ್ಕಳು ಸ್ವಾಮೀಜಿಯವರಿಂದ ಪ್ರಮಾಣಪತ್ರ ಸ್ವೀಕರಿಸಿದರು. ಪುಟಾಣಿಗಳು ವಿವಿಧ ನೃತ್ಯ ಮಾಡುವುದರೊಂದಿಗೆ ಕಾರ್ಯಕ್ರಮದಲ್ಲಿದ್ದ ಪೋಷಕರು ಹಾಗು ಶಿಕ್ಷಕರ ಮನತಣಿಸಿದರು.

ಬಿಜಿಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ, ಬಿಜಿಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಕೆ.ಮಹದೇವ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ಮುಖಂಡರಾದ ಡಾ.ಧನಂಜಯರೆಡ್ಡಿ, ದಿಬ್ಬೂರಹಳ್ಳಿ ಡಿ.ಎಸ್.ಎನ್.ರಾಜಣ್ಣ ಹಾಜರಿದ್ದರು.


Sri Mangalanath Swamiji Emphasizes Importance of Home Environment in Children’s Education

Sidlaghatta : Sri Mangalanath Swamiji of Adichunchanagiri Chikkaballapur Branch Math has emphasized the importance of creating a good learning environment at home and instilling a culture of respect towards elders in children. Speaking at the Mata Pitru Vandana program called “Swasthi” and the UKG Children’s Graduation Day held at BGS Public School near Hanumanthapura Gate on the outskirts of Sidlaghatta town, he reminded the audience that a child’s education begins at home, and that children learn more from their homes and society than from school.

Swamiji urged parents to ensure that their children learn good manners, morals, and values from an early age. He emphasized that what children learn in childhood is like the foundation of a building, which helps them throughout their lives. While television can be a source of knowledge, Swamiji cautioned against overexposure, which can lead children astray.

Tahsildar B.N. Swamy also spoke at the event, highlighting the importance of teaching children to respect their parents and elders. He stressed that there is no God other than mother and father, and that parents should also teach their children tolerance from an early age.

The program included narration, explanation, introduction, and salutations by children in their sweet language, which was appreciated by all. The little children who had brought their parents to the school gathered them on a chair, washed their feet, offered flowers, and saluted them.

UKG children who completed their nursery studies received a certificate from Swamiji, and they entertained the parents and teachers present in the program by performing various dances. The program was a celebration of the young children’s achievements and a reminder of the importance of instilling good values and respect towards elders in the next generation.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version