ಪದವೀಧರರ ಧ್ವನಿಯಾಗಲು ಸ್ವತಂತ್ರ ಅಭ್ಯರ್ಥಿ: ಪಕ್ಷಕ್ಕಿಂತ ವ್ಯಕ್ತಿತ್ವಕ್ಕೆ ಆದ್ಯತೆ ನೀಡಿ ಎಂದ ವಕೀಲ ಬರೀದ್

- Advertisement -
- Advertisement -

Sidlaghatta : ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶದಿಂದ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಮತದಾರರು ಪಕ್ಷಕ್ಕಿಂತ ಅಭ್ಯರ್ಥಿಯ ವ್ಯಕ್ತಿತ್ವ, ಅನುಭವ ಮತ್ತು ಸೇವಾ ಮನೋಭಾವಕ್ಕೆ ಆದ್ಯತೆ ನೀಡಬೇಕು ಎಂದು ವಕೀಲ ಬರೀದ್ ಮನವಿ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರರ ಸಮಸ್ಯೆಗಳ ಅರಿವು ತಮಗಿದ್ದು, ಅವುಗಳ ಪರಿಹಾರಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

“ಪದವೀಧರರನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರು ಅವರ ಸಮಸ್ಯೆಗಳ ಕುರಿತು ಧ್ವನಿ ಎತ್ತುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿಲ್ಲ. ಆಯ್ಕೆಯಾದ ಬಳಿಕ ಬಹುತೇಕರು ರೆಸಾರ್ಟ್ ರಾಜಕಾರಣಕ್ಕೆ ಸೀಮಿತವಾಗುತ್ತಿದ್ದಾರೆ. ಈ ಬಗ್ಗೆ ಪ್ರಜ್ಞಾವಂತ ಪದವೀಧರ ಮತದಾರರು ಗಂಭೀರವಾಗಿ ಚಿಂತಿಸಬೇಕಿದೆ” ಎಂದರು.

“ನಾನು ಸಮಾಜ ಸೇವೆ ಮಾಡಿದ್ದೇನೆ ಎಂದು ಸುಳ್ಳು ಹೇಳುವುದಿಲ್ಲ. ಅನಗತ್ಯ ಭರವಸೆಗಳನ್ನೂ ನೀಡುವುದಿಲ್ಲ. ಅವಕಾಶ ನೀಡಿದರೆ ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಯುವಕನಾದ ನನಗೆ ಒಂದು ಅವಕಾಶ ನೀಡಬೇಕು” ಎಂದು ಕೋರಿದರು.

2020ಕ್ಕೆ ಹೋಲಿಸಿದರೆ ಈ ಬಾರಿ 70 ಸಾವಿರಕ್ಕೂ ಹೆಚ್ಚು ಪದವೀಧರರು ಹೆಚ್ಚುವರಿಯಾಗಿ ನೋಂದಣಿಯಾಗಿದ್ದಾರೆ. ಮತದಾರರ ನೋಂದಣಿ ಕುರಿತು ಅರಿವು ಮೂಡಿಸಲು ಪ್ರಯತ್ನಿಸಿರುವುದಾಗಿ ಹೇಳಿದರು.

ಪ್ರಣಾಳಿಕೆಯಲ್ಲಿ ಏನೇನಿದೆ?

ಪದವೀಧರರ ಕುಂದುಕೊರತೆಗಳ ಪರಿಹಾರಕ್ಕಾಗಿ ಐದು ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ವೇದಿಕೆ ಸ್ಥಾಪಿಸುವುದು, ಸಾರ್ವಜನಿಕ ಗ್ರಂಥಾಲಯಗಳಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಪಡಿಸುವುದು ಹಾಗೂ ಡಿಜಿಟಲೀಕರಣಗೊಳಿಸುವುದು, ಪದವೀಧರರು ತಮ್ಮ ಸಮಸ್ಯೆಗಳನ್ನು ನೇರವಾಗಿ ದಾಖಲಿಸಲು ಡಿಜಿಟಲ್ ವೇದಿಕೆ ರೂಪಿಸುವುದು ತಮ್ಮ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿವೆ ಎಂದು ತಿಳಿಸಿದರು.

ಶಿಕ್ಷಕರ ವೇತನ ಮತ್ತು ಸೇವಾ ಸಮಸ್ಯೆಗಳಿಗೆ ಸ್ಪಂದಿಸುವುದು, ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ವಿದ್ಯುತ್ ಸಮಸ್ಯೆ ತಪ್ಪಿಸಲು ಸೌರ ಫಲಕ ಅಳವಡಿಕೆಗೆ ಪ್ರಯತ್ನಿಸುವುದು ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ಗುಣಮಟ್ಟದ ಕನ್ನಡ ಪಠ್ಯಪುಸ್ತಕ ಮತ್ತು ಅಧ್ಯಯನ ಸಾಮಗ್ರಿಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದು ತಮ್ಮ ಪ್ರಮುಖ ಗುರಿಗಳಾಗಿವೆ ಎಂದರು.

ಬಹಿರಂಗ ಚರ್ಚೆಗೆ ಆಗ್ರಹ

ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳನ್ನು ಒಂದೇ ವೇದಿಕೆಗೆ ಆಹ್ವಾನಿಸಿ ಬಹಿರಂಗ ಚರ್ಚೆ ಆಯೋಜಿಸಬೇಕು. ಈ ಹಿಂದೆ ಆಯ್ಕೆಯಾದ ಪ್ರತಿನಿಧಿಗಳು ಪದವೀಧರರಿಗಾಗಿ ಮಾಡಿದ ಕೆಲಸಗಳು ಹಾಗೂ ಅಭ್ಯರ್ಥಿಗಳ ಮುಂದಿನ ಯೋಜನೆಗಳ ಕುರಿತು ಚರ್ಚೆ ನಡೆದರೆ ಮತದಾರರು ಸೂಕ್ತ ನಿರ್ಧಾರ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ವಕೀಲರಾದ ವಸೀಮ್, ಆದರ್ಶ, ಇನಾಯತ್, ಸಫ್ದರ್ ಹಾಜರಿದ್ದರು.

In English: Advocate Bareed, contesting as an independent candidate in the Karnataka South-East Graduates’ Constituency election to the Legislative Council, told a press meet at the Journalists’ Bhavan in Sidlaghatta on Monday that voters should give priority to the candidate’s character, experience and spirit of service over party. He said graduates’ issues are not being raised after election and promised to work sincerely if elected, and called for an open debate among all candidates. His manifesto includes grievance forums in the five district centres, more grants and digitisation for public libraries and a digital platform for graduates to register problems. These are the candidate’s own claims.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -