Home News ಜೈ ಭಜರಂಗಬಲಿ ವ್ಯಾಯಾಮ ಶಾಲೆಗೆ ಸುವರ್ಣ ವಾರ್ಷಿಕೋತ್ಸವದ ಸಂಭ್ರಮ

ಜೈ ಭಜರಂಗಬಲಿ ವ್ಯಾಯಾಮ ಶಾಲೆಗೆ ಸುವರ್ಣ ವಾರ್ಷಿಕೋತ್ಸವದ ಸಂಭ್ರಮ

0
Jai Bhajarangabali Vyayama shale Golden Jubilee Celebration

Sidlaghatta : ಶಿಡ್ಲಘಟ್ಟ ನಗರದ ಚಿಂತಾಮಣಿ ರಸ್ತೆಯಲ್ಲಿರುವ ಜೈ ಭಜರಂಗಬಲಿ ವ್ಯಾಯಾಮ ಶಾಲೆಯು 1972 ರ ವಿಜಯ ದಶಮಿಯಂದು ಪ್ರಾರಂಭವಾಗಿ 2022 ರ ವಿಜಯದಶಮಿಗೆ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ವ್ಯಾಯಾಮ ಶಾಲೆಯಲ್ಲಿ (Jai Bharajarangabali Vyayama Shale) ಸುವರ್ಣ ಮಹೋತ್ಸವದ ಸಂಭ್ರಮಾಚರಣೆ (Golden Jubilee Celebration) ಹಾಗೂ ದಸರ ಹಬ್ಬವನ್ನು ಆಚರಿಸಲಾಯಿತು.

ವ್ಯಾಯಾಮಶಾಲೆಯನ್ನು ಕಟ್ಟಿ, ಪೋಷಿಸಿ ಬೆಳೆಸಿದಂತಹ ಎಲ್ಲಾ ಹಿರಿಯರು ಹಾಗೂ ವ್ಯಾಯಾಮ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜೈಭಜರಂಗಬಲಿ ವ್ಯಾಯಾಮ ಶಾಲಾ ನಿರ್ವಹಣಾ ಸಮಿತಿ ವತಿಯಿಂದ ವ್ಯಾಯಾಮಶಾಲೆಯ ಗುರು ವಿ.ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು.

ವ್ಯಾಯಾಮ ಶಾಲೆಯ ಪೋಷಕರು ಮತ್ತು ಕುಸ್ತಿ ದೇಹದಾಡ್ಯ, ಕಬಡ್ಡಿ, ವಾಲಿಬಾಲ್ ಮುಂತಾದ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಎ.ಎಸ್. ರವಿ, ಜೆ.ಜೆ. ಶ್ರೀನಿವಾಸ್, ಎ.ಟಿ.ವೆಂಕಟ ರತ್ನಯ್ಯ, ಆರ್. ಶ್ರೀರಾಮಣ್ಣ, ಎನ್.ದೇವರಾಜು, ಎಸ್.ಆರ್.ವಿನೋದ್, ಮುನಯ್ಯ, ಗೋಪಿ, ಮುನಿರಾಜು, ಎಚ್‌.ಪಿ. ಸುದರ್ಶನ್, ಅರ್ಜುನ್, ಪ್ರಕಾಶ್, ಅಭಿ, ಮಂಜು, ಯಶ್ವಂತ್, ಶ್ರೇಯಸ್, ಎಂ.ಎಚ್.ಸತ್ಯ, ಜೆ.ವಿ.ಸುರೇಶ್, ಶಂಕರ್, ಎಸ್. ರವಿ, ವೆಂಕಟೇಶ್ ಅವರಿಗೆ ವ್ಯಾಯಾಮ ಶಾಲೆಯ ರುಮಾಲನ್ನು ತಲೆಗೆ ತೊಡಿಸಿ ಸನ್ಮಾನಿಸಲಾಯಿತು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version