Home News ಮಧುಮೇಹ ಕುರಿತು ಜಾಗೃತಿ ಜಾಥಾ

ಮಧುಮೇಹ ಕುರಿತು ಜಾಗೃತಿ ಜಾಥಾ

0
Diabetes Awareness March

Sidlaghatta : ಲಯನ್ಸ್ ಕ್ಲಬ್ ಮತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಮಧುಮೇಹ ಕುರಿತು ಜನರಿಗೆ ಅರಿವು ಮೂಡಿಸುವ ಸಲುವಾಗಿ ಮಂಗಳವಾರ ನಗರದಲ್ಲಿ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು

ರೋಗ ಬಾರದಂತೆ ವಹಿಸಬೇಕಾದ ಎಚ್ಚರಿಕೆ, ರೋಗ ಬಂದರೆ ಕೈಗೊಳ್ಳಬೇಕಾದ ಕ್ರಮಗಳ ಮಾಹಿತಿ ಒಳಗೊಂಡ ಭಿತ್ತಿ ಪತ್ರಗಳನ್ನು ಹಿಡಿದ ವಿದ್ಯಾರ್ಥಿಗಳು ಮತ್ತು ಲಯನ್ ಕ್ಲಬ್ ಸದಸ್ಯರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಬಸ್ ನಿಲ್ದಾಣದವರೆಗೂ ಟಿಬಿ ರಸ್ತೆಯಲ್ಲಿ ಸಾಗಿ ತಾಲ್ಲೂಕು ಕಚೇರಿ ಸಾರ್ವಜನಿಕ ಆಸ್ಪತ್ರೆಯ ಮುಂದೆ ಸಂಚರಿಸಿ ಜನರಲ್ಲಿ ಅರಿವು ಮೂಡಿಸಿದರು.

ಶಿಡ್ಲಘಟ್ಟ ತಾಲ್ಲೂಕು ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಹರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣ ಯುವಜನರ ಜೀವನಶೈಲಿ, ಕಳಪೆ ಆಹಾರ ಪದ್ಧತಿಗಳು, ವ್ಯಾಯಾಮ ಮಾಡದೇ ಇರುವುದು ಹಾಗೂ ವರ್ತನೆ, ಅಭ್ಯಾಸಗಳು. ಇದರ ಪರಿಣಾಮ ಯುವ ಸಮುದಾಯದಲ್ಲಿ ಮಧುಮೇಹ ಹೆಚ್ಚಾಗುತ್ತಿದೆ ಎಂದು ಹೇಳಿದರು.

ನಮ್ಮ ಲಯನ್ ಕ್ಲಬ್ ಮೂಲ ಉದ್ದೇಶ ಈ ಮಧುಮೇಹ ರೋಗವನ್ನು ನಿಯಂತ್ರಿಸಲು ಜನರಲ್ಲಿ ಅರಿವು ಮೂಡಿಸುವ ಮೂಲಕ ಮಧುಮೇಹವೆಂಬ ಪಿಡುಗನ್ನು ನಮ್ಮ ಸಮಾಜದಿಂದ ಹೋಗಲಾಡಿಸುವ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕ್ರಮಕೈಗೊಳ್ಳವುದಾಗಿದೆ ಎಂದರು.

ತಾಲ್ಲೂಕು ಲಯನ್ಸ್ ಕ್ಲಬ್ ಕಾರ್ಯದರ್ಶಿ ಅಜಯ್ ಕೀರ್ತಿ ಮಾತನಾಡಿ, ಮಧುಮೇಹಕ್ಕೆ ದೈಹಿಕ ವ್ಯಾಯಾಮದ ಕೊರತೆ, ಅನಿಯಮಿತ ಆಹಾರ ಪದ್ಧತಿ, ಒತ್ತಡ, ಆತಂಕ, ಖಿನ್ನತೆ ಪ್ರಮುಖ ಕಾರಣಗಳಾಗಿವೆ. ಯೋಗ ಮತ್ತು ಧ್ಯಾನಗಳಿಂದ ಖಿನ್ನತೆ, ಒತ್ತಡ ನಿವಾರಣೆಯಾಗಿ ದೇಹದ ತೂಕ ಇಳಿಕೆಯಾಗುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಪೌಷ್ಠಿಕ ಆಹಾರ, ವ್ಯಾಯಾಮ, ಧ್ಯಾನ, ಉತ್ತಮ ಅಭ್ಯಾಸಗಳು ಮತ್ತು ಹವ್ಯಾಸಗಳು ನಮ್ಮದಾಗಬೇಕು ಎಂದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿ.ವೆಂಕಟೇಶ್ ಮಾತನಾಡಿ, ಕೇವಲ ವ್ಯಾಯಾಮ, ಪೋಷಕಾಂಶವುಳ್ಳ ಆಹಾರಗಳು ಮಾತ್ರ ಮಧುಮೇಹದ ಅಪಾಯದಿಂದ ಕಾಪಾಡುವುದಿಲ್ಲ. ಬದಲಾಗಿ ಮಾನಸಿಕ ಸಮಸ್ಯೆಯನ್ನು ಹೆಚ್ಚಿಸುವ ಒತ್ತಡದಿಂದ ಕೂಡ ಪಾರಾಗಬೇಕು. ಒತ್ತಡವು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಅವಕಾಶಗಳಿವೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಲಯನ್ ಕ್ಲಬ್ ಸದಸ್ಯರಾದ ನಾರಾಯಣಸ್ವಾಮಿ, ವಿಜಯಕುಮಾರ್, ಮೊಹಮ್ಮದ್ ಅಮಾನುಲ್ಲಾ, ರಜಿತಾ ಕೀರ್ತಿ, ಮಂಜುನಾಥ್, ಅನಿಲ್ ಕುಮಾರ್, ವಿಜಯ್ ಕುಮಾರ್, ಚಂದ್ರಶೇಖರ್, ಶ್ರೀನಿವಾಸ್, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version