KOCHIMUL ನಿಂದ 30 ರೈತರಿಗೆ 17 ಲಕ್ಷ ರೂಪಾಯಿಗಳ ವಿಮೆ ಹಣದ ಚೆಕ್ ವಿತರಣೆ

- Advertisement -
- Advertisement -

Sidlaghatta : ಬೇಸಿಗೆ ಕಾಲದಲ್ಲಿ ಮೇವಿಗೆ ಸ್ವಲ್ಪ ಸಮಸ್ಯೆ ಆಗಬಹುದು, ಅಂದ ಮಾತ್ರಕ್ಕೆ ಹಾಲು ಕೊಡುವ ರಾಸುಗಳನ್ನು ಮಾರಾಟ ಮಾಡಬೇಡಿ ಎಂದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಶಿಡ್ಲಘಟ್ಟ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್ ರೈತರಲ್ಲಿ ಮನವಿ ಮಾಡಿದರು.

ನಗರದಲ್ಲಿನ ಕೋಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮೃತಪಟ್ಟ ಸೀಮೆ ಹಸುಗಳ ಬಾಬ್ತು ವಿಮೆಯ ಹಣದ ಚೆಕ್ ವಿತರಿಸಿ ಮಾತನಾಡಿದರು.

ಈ ವರ್ಷ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಸ್ವಲ್ಪ ಮೇವಿನ ಸಮಸ್ಯೆ ಎದುರಾಗಬಹುದು. ಅದು ಕೇವಲ ತಾತ್ಕಾಲಿಕವಾಗಿರುತ್ತದೆ. ಸರ್ಕಾರವೂ ಸಹ ರೈತರ ಜತೆಗಿದ್ದು ಮೇವಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಧೈರ್ಯ ತುಂಬಿದರು.

ರೈತರು ತಪ್ಪದೆ ತಮ್ಮ ಸೀಮೆ ಹಸುಗಳಿಗೆ ವಿಮೆ ಮಾಡಿಸಿ, ಒಂದೊಮ್ಮೆ ರಾಸುಗಳು ಮೃತಪಟ್ಟರೆ ವಿಮೆ ಹಣವಾದರೂ ನಿಮ್ಮ ಕಷ್ಟಕ್ಕೆ ನೆರವಾಗುತ್ತದೆ ಎಂದು ವಿಮೆಯ ಮಹತ್ವವನ್ನು ವಿವರಿಸಿದರು. 30 ಮಂದಿ ರೈತರಿಗೆ 17 ಲಕ್ಷ ರೂಪಾಯಿಗಳ ವಿಮೆಯ ಚೆಕ್‌ಗಳನ್ನು ವಿತರಿಸಲಾಯಿತು. ಕೋಚಿಮುಲ್ ಮೇಲ್ವಿಚಾರಕರು, ರೈತರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!