
Melur, Sidlaghatta : ಬೇಸಿಗೆ ಶಿಬಿರಗಳನ್ನು ಮಕ್ಕಳು ಸದುಪಯೋಗ ಮಾಡಿಕೊಂಡು, ಉತ್ತಮ ಕಲಿಕೆಯತ್ತ ಗಮನಹರಿಸಬೇಕು ಎಂದು ಮೇಲೂರು ಗ್ರಾ.ಪಂ ಕಾರ್ಯದರ್ಶಿ ಪಿ.ಎನ್.ಶ್ರೀನಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾ.ಪಂ ಕಾರ್ಯಾಲಯದಲ್ಲಿನ ಅರಿವು ಕೇಂದ್ರ, ಡಿಜಿಟಲ್ ಗ್ರಂಥಾಲಯದ ವತಿಯಿಂದ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ-2026 ರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬೇಸಿಗೆಯಲ್ಲಿ, ಬಿಸಿಲಿನ ತಾಪಮಾನ ಹೆಚ್ಚಾಗಿರುವ ಕಾರಣ, ಪೋಷಕರು ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸುವ ಮೂಲಕ ಅವರ ಆರೋಗ್ಯವನ್ನು ಸುಧಾರಣೆ ಮಾಡುವುದರ ಜೊತೆಗೆ, ಅವರು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳುವಂತೆ ಗಮನಹರಿಸಬೇಕು. ಇಂತಹ ಶಿಬಿರಗಳಲ್ಲಿ, ಕಲೆ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ, ಹಲವಾರು ಆಟ ಪಾಠಗಳನ್ನು ಕಲಿಯುವುದರ ಜೊತೆಗೆ, ದೈಹಿಕವಾಗಿ ಆರೋಗ್ಯವಾಗಿರಲು ಅನುಸರಿಬೇಕಾಗಿರುವ ಕ್ರಮಗಳನ್ನು ಕಲಿಸುವುದರಿಂದ ಮಕ್ಕಳನ್ನು ತೊಡಗಿಸಿ, ಬೇಸಿಗೆಯಲ್ಲಿ ಅವರ ಆರೋಗ್ಯ ಸಂರಕ್ಷಿಸಬೇಕು ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಿಂದ 6 ರಿಂದ 13 ವರ್ಷದ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.
ಗ್ರಾಮ ಪಂಚಾಯಿತಿ ಡಿ.ಇ.ಓ ದ್ಯಾವಪ್ಪ, ಗ್ರಂಥಪಾಲಕ ಅಭಿಷೇಕ್, ಗ್ರಾಮ ಪಂಚಾಯಿತಿ ಕಾಯಕಮಿತ್ರ ಎಸ್.ರೇಣುಕಾ, ನರಸಿಂಹಪ್ಪ, ಜಿ.ಟಿ.ಶಿವಕುಮಾರ್, ಮುರಳಿ, ಯಶೋದಮ್ಮ ಗ್ರಾಮ ಸಹಾಯಕ ರಮೇಶ್ ಹಾಜರಿದ್ದರು.