23.1 C
Sidlaghatta
Wednesday, February 18, 2026

ವಾರಕ್ಕೊಮ್ಮೆ ಮೇಲೂರಿನಲ್ಲಿ ಆರೋಗ್ಯ ಕಾರ್ಡ್ ಸೇವೆ

- Advertisement -
- Advertisement -

‘ಶ್ರೀ ಎಚ್‌.ಡಿ.ದೇವೇಗೌಡ ರವರ ಮತ್ತು ಶ್ರೀ ಜಯಪ್ರಕಾಶ್‌ ನಾರಾಯಣ್‌ ರವರ ಸೇವಾಭಿವೃದ್ಧಿ ಚಾರಿಟಬಲ್‌ ಟ್ರಸ್ಟ್‌’ ವತಿಯಿಂದ ಮೇಲೂರಿನ ಗೌಡ ಕಮ್ಯುನಿಕೇಷನ್ಸ್ ನಲ್ಲಿ ಆಯೋಜಿಸಿದ್ದ ಗ್ರಾಮಸ್ಥರಿಗೆ ಆರೋಗ್ಯ ಕಾರ್ಡ್ ಮಾಡಿಸಿಕೊಡುವ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ.ಉಮೇಶ್ ಮಾತನಾಡಿದರು.

ಬಡವರಿಗೆ ಆರೋಗ್ಯ ಭದ್ರತೆ ಒದಗಿಸುವ “ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ” ಯೋಜನೆ ಕಾರ್ಡ್‌ ಗ್ರಾಮಸ್ಥರಿಗೆ ಸಿಗಬೇಕೆಂದು ಪ್ರತಿ ಶನಿವಾರ ಸಂಬಂಧಪಟ್ಟ ಸೇವಾಕೇಂದ್ರದವರನ್ನು ಮೇಲೂರಿಗೆ ಕರೆಸಿ ಕಾರ್ಡ್ ಮಾಡಿಸಿಕೊಡಲಾಗುತ್ತಿದೆ ಎಂದು  ತಿಳಿಸಿದರು.

 ಬಿಪಿಎಲ್‌ ಪಡಿತರ ಚೀಟಿ ಹೊಂದಿದವರಿಗೆ ವರ್ಷಕ್ಕೆ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ನೀಡುವ ಈ ಯೋಜನೆಯಡಿ ಕಾರ್ಡ್‌ಗಳ ವಿತರಣೆ ಗ್ರಾಮೀಣ ಬಡ ಕುಟುಂಬಗಳಿಗೆ ಪೂರ್ಣ ಮಟ್ಟದಲ್ಲಿ ಆಗಿಲ್ಲ. ಕೊರೊನಾ ಕಾರಣದಿಂದ ಜಂಗಮಕೋಟೆಗೆ ಹೋಗಿ ಕಾರ್ಡ್ ಮಾಡಿಸಿಕೊಂಡು ಬರಲು ತೊಂದರೆಯಾಗುತ್ತಿತ್ತು. ಅದಕ್ಕಾಗಿ ಟ್ರಸ್ಟ್ ವತಿಯಿಂದ ಪ್ರತಿ ಶನಿವಾರ ಈ ಸೇವೆಯನ್ನು ಗ್ರಾಮದಲ್ಲಿ ಒದಗಿಸುತ್ತಿದ್ದೇವೆ. ಆಧಾರ್‌ ಕಾರ್ಡ್‌ ಮತ್ತು ಪಡಿತರ ಚೀಟಿ ಹಾಜರುಪಡಿಸಿ ಆರೋಗ್ಯ ಕಾರ್ಡ್‌ ಪಡೆಯಬಹುದಾಗಿದೆ ಎಂದು ಹೇಳಿದರು.

 ಡಿಜಿಟಲ್ ಸೇವಾ ಕೇಂದ್ರ ಮತ್ತು ಸೇವಾಸಿಂಧು ಜೆ.ಕೆ.ರವಿಕುಮಾರ್ ಮಾತನಾಡಿ, ಜಂಗಮಕೋಟೆಯಲ್ಲಿ ನಮ್ಮ ಕೇಂದ್ರವಿದೆ. ಕೋವಿಡ್ ಕಾರಣದಿಂದ ಜನರು ಹೆಚ್ಚು ಓಡಾಡಬಾರದಾದ್ದರಿಂದ ಬಹಳಷ್ಟು ಮಂದಿಗೆ ಆರೋಗ್ಯ ಕಾರ್ಡ್ ಪಡೆಯಲು ಕಷ್ಟವಾಗುತ್ತಿದೆ. ಮೇಲೂರಿನಲ್ಲಿ ಸೇವೆ ಒದಗಿಸಲು ಅನುಕೂಲ ಮಾಡಿಕೊಟ್ಟು, ಜನರಿಗೆ ಸಹಾಯವಾಗುತ್ತಿದೆ ಎಂದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!