News

ಬೆಂಕಿ ರೋಗ ನಿರೋಧಕ ಎಂ.ಎಲ್.365 ರಾಗಿ ತಳಿಯ ಪ್ರಾತ್ಯಕ್ಷಿಕೆ

Sidlaghatta Appegowdanahalli ML365 Ragi Strain Agriculture workshop

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕೃಷಿ ವಿಸ್ತರಣಾ ವಿಭಾಗದ ವತಿಯಿಂದ ಅಪ್ಪೆಗೌಡನಹಳ್ಳಿ ಗ್ರಾಮದಲ್ಲಿ ಹವಾಮಾನ ಚತುರ ಕೃಷಿ ಯೋಜನೆ ಅಡಿಯಲ್ಲಿ ಎಂ.ಎಲ್-365 ರಾಗಿ ತಳಿಯ ಪ್ರಾತ್ಯಕ್ಷಿಕೆ ತಾಕಿನಲ್ಲಿ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.

 ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದ ಪ್ರಾಧ್ಯಾಪಕ ಡಾ. ವೈ.ಎನ್.ಶಿವಲಿಂಗಯ್ಯ ಮಾತನಾಡಿ, “ಈ ತಳಿಯು ಬೆಂಕಿ ರೋಗ ಮತ್ತು ಇಲುಕ ರೋಗ ನಿರೋಧಕ ತಳಿಯಾಗಿದೆ. 100 ರಿಂದ 105 ದಿನಗಳಲ್ಲಿ ಕಟಾವಿಗೆ ಬರಲಿದೆ ಎಂದರು. ಉತ್ತಮ ಗುಣಮಟ್ಟದ 10-12 ಕ್ವಿಂಟಾಲ್ ಧಾನ್ಯವನ್ನು ಮತ್ತು 2 ರಿಂದ 2.5 ಟನ್ ರಷ್ಟು ಒಣಹುಲ್ಲನ್ನು ಪ್ರತಿ ಏಕರೆಯಿಂದ ನಿರೀಕ್ಷಿಸಬಹುದು” ಎಂದು ತಿಳಿಸಿದರು.

 ಪ್ರಾತ್ಯಕ್ಷಿಕೆ ತಾಕುಗಳಲ್ಲಿ ನ್ಯಾನೋ ಯೂರಿಯಾ(5ಗ್ರಾಂ ಪ್ರತಿ ಲೀಟರ್ ನೀರಿಗೆ) ಮತ್ತು 19:19:19 ನೀರಿನಲ್ಲಿ ಕರಗುವ ರಸಗೊಬ್ಬರವನ್ನು (5ಗ್ರಾಂ ಪ್ರತಿ ಲೀಟರ್ ನೀರಿಗೆ) ಬೆರೆಸಿ ಸಿಂಪಡಿಸಿದರೆ ಬೆಳೆಯ ಬೆಳವಣಿಗೆ ಉತ್ತಮವಾಗಿ ಬರುತ್ತದೆ. 7 ರಿಂದ 10 ರಷ್ಟು ಹೆಚ್ಚಿನ ಇಳುವರಿ ನಿರೀಕ್ಷಿಸಬಹುದು ಎಂದು ವಿವರಿಸಿದರು.

ಗ್ರಾಮಸ್ಥರಾದ ಎ.ಎಂ.ತ್ಯಾಗರಾಜ್, ಮುನಿಂದ್ರ, ಕೃಷ್ಣೆ ಗೌಡ, ವೆಂಕಟೇಶ, ಹರೀಶ್, ಅರ್ಜುನ್, ಭೈರ ರೆಡ್ಡಿ, ರಾಘವೇಂದ್ರ, ಭಾರ್ಗವ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

🔔 ಹೊಸ ಸುದ್ದಿ ಫೋನ್‌ನಲ್ಲಿ ಬೇಕಾ?

ನ್ಯೂಸ್ ಬಂದ ತಕ್ಷಣ alert ಬರುತ್ತದೆ

Free ✔ ಯಾವಾಗ ಬೇಕಾದರೂ off
By turning on you agree to the Terms and Privacy Notice.

📈 ಇಂದಿನ silk rateCB ₹716 · BV ₹840 per kg🔥 ಹೆಚ್ಚು ಓದಿದ್ದುಹುಟ್ಟಿದ 8ನೇ ದಿನಕ್ಕೇ ಆಧಾರ್, 12ನೇ ದಿನಕ್ಕೆ ರೇಷನ್ ಕಾರ್ಡ್: ಹಸುಗೂಸಿಗೆ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ

⚠️ Report an error in this story

📰 ಇದನ್ನೂ ಓದಿ

📸 ನಿಮ್ಮ ಊರಿನ ಸುದ್ದಿ ಇದೆಯೇ?

ಫೋಟೋ ಸಮೇತ ಕಳುಹಿಸಿ

💬 Send news📢 Daily updates: join our WhatsApp channel

Google ನಲ್ಲಿ ನಮ್ಮ ಸುದ್ದಿ ಹೆಚ್ಚು ನೋಡಲು