Home News ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವಂತೆ ಆಯುಕ್ತರಲ್ಲಿ ಮನವಿ

ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವಂತೆ ಆಯುಕ್ತರಲ್ಲಿ ಮನವಿ

0
Sidlaghatta Mulberry silk Farmers Government

ರೇಷ್ಮೆ ಬೆಳೆಗಾರರು ತೀರಾ ಸಂಕಷ್ಟದಲ್ಲಿರುವುದರಿಂದ ರೇಷ್ಮೆ ಇಲಾಖೆ ನೆರವಾಗಬೇಕಿದೆ ಎಂದು ರೇಷ್ಮೆ ಆಯುಕ್ತ ಪೆದ್ದಯ್ಯ ಅವರಿಗೆ ಮನವಿ ಮಾಡಿದರು.

 ರೈತ ಸಂಘದ ನಿಯೋಗದೊಂದಿಗೆ ಅವರು ಬೆಂಗಳೂರಿನ ರೇಷ್ಮೆ ಆಯುಕ್ತರ ಕಚೇರಿಯಲ್ಲಿ ರೇಷ್ಮೆ ಬೆಳೆಗಾರರ ಸಂಕಷ್ಟಗಳನ್ನು ವಿವರಿಸಿ ಇಲಾಖೆ ಮಧ್ಯ ಪ್ರವೇಶಿಸುವಂತೆ ಕೋರಿದರು.

 ಇತ್ತೀಚಿನ ಮಳೆ ಹಾಗೂ ವಾತಾವರಣ ವೈಪರೀತ್ಯದಿಂದಾಗಿ ಹಿಪ್ಪುನೇರಳೆ ಸೊಪ್ಪಿಗೆ ವಿವಿಧ ರೋಗಗಳು ತಗುಲುತ್ತಿವೆ. ರೋಗ ಹತೋಟಿಗೆ ತರಲು ರಾಸಾಯನಿಕಗಳನ್ನು ಇಲಾಖೆ ವತಿಯಿಂದ ನೀಡುತ್ತೇವೆಂದು ಆಯುಕ್ತರು ಭರವಸೆ ನೀಡಿದರು.

 ರೇಷ್ಮೆ ಕಟಾವು ಯಂತ್ರ ಬೇಕೆನ್ನುವುದು ನಮ್ಮ ರೇಷ್ಮೆ ಬೆಳೆಗಾರರ ಪ್ರಮುಖ ಬೇಡಿಕೆಯಾಗಿದೆ. ರೇಷ್ಮೆ ಕೂಲಿ ಆಳುಗಳಿಗೆ ನರೇಗಾ ಯೋಜನೆ ಲಾಗೂ ಆಗುವಂತೆ ಮಾಡಬೇಕೆಂದು ಬೇಡಿಕೆಯನ್ನು ರೈತರು ಮುಂದಿಟ್ಟರು. ಹನಿನೀರಾವರಿ ಬಳಸಲು ಏಳು ವರ್ಷಗಳ ನಂತರ ಮತ್ತೊಮ್ಮೆ ನೀಡುವಂತೆ ಮನವಿ ಸಲ್ಲಿಸಲಾಯಿತು. ರೇಷ್ಮೆ ಇಲಾಖೆಯಲ್ಲಿ 4500 ಅಧಿಕಾರಿಗಳ ಬದಲು 1500 ಮಂದಿಯಷ್ಟೇ ಇದ್ದಾರೆ. ಇದೇ ರೀತಿ ಮುಂದುವರಿದಲ್ಲಿ ಇಲಾಖೆ ಕಣ್ಮುಚ್ಚುತ್ತದೆ ಎಂದು ರೈತ ಮುಖಂಡರು ವಿವರಿಸಿದಾಗ, ಆಯುಕ್ತರು 750 ಮಂದಿಯನ್ನು ಇಲಾಖೆಗೆ ಸೇರಿಸಿಕೊಳ್ಳಲು ಅನುಮೋದನೆ ದೊರಕಿದೆ ಎಂದರು.

 ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಗೆ 1400 ಲಾಟ್ ರೇಷ್ಮೆ ಗೂಡಿನ ಆವಕವಿತ್ತು. ಇವತ್ತು 200 ಕ್ಕೂ ಕಡಿಮೆ ಲಾಟ್ ಗಳು ಬರಿತ್ತಿರುವ ಬಗ್ಗೆ ಸುಧೀರ್ಘವಾಗಿ ಚರ್ಚಿಸಿದರು. ಈ ಬಗ್ಗೆ ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬಂದು ವಸ್ತುಸ್ಥಿತಿ ಪರಿಶೀಲಿಸುವುದಾಗಿ ಆಯುಕ್ತರು ಹೇಳಿದರು.

 ಚಿಕ್ಕಬಳ್ಳಾಪುರದ ರೇಷ್ಮೆ ಗೂಡಿನ ಮಾರುಕಟ್ಟೆಯ ಎರಡು ಎಕರೆ ಜಾಗದಲ್ಲಿ ರೇಷ್ಮೆ ತರಬೇತಿ ಕೇಂದ್ರವನ್ನು ಸ್ಥಾಪಿಸಲೆಂದು 5 ಕೋಟಿ ರೂ ಮಂಜೂರಾತಿ ದೊರಕಿದೆ. ಇನ್ನೂ 15 ಕೋಟಿ ರೂ ನೀಡಬೇಕೆಂದು ರೈತ ಮುಖಂಡರು ಬೇಡಿಕೆಯನ್ನು ಇಟ್ಟು ಮನವಿ ಸಲ್ಲಿಸಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version