Home News ರೇಷ್ಮೆ ಬೆಳೆಗಾರರ ರೈತ ಉತ್ಪಾದಕರ ಕಂಪನಿಯ ಸರ್ವಸದಸ್ಯರ ವಾರ್ಷಿಕ ಮಹಾಸಭೆ

ರೇಷ್ಮೆ ಬೆಳೆಗಾರರ ರೈತ ಉತ್ಪಾದಕರ ಕಂಪನಿಯ ಸರ್ವಸದಸ್ಯರ ವಾರ್ಷಿಕ ಮಹಾಸಭೆ

0

Jangamakote, Sidlaghatta : ಕೈಗಾರಿಕೆಗಳ ಸ್ಥಾಪನೆಗೆ ನಮ್ಮ ವಿರೋಧವಿಲ್ಲ. ಆದರೆ ಫಲವತ್ತಾದ ಭೂಮಿಯನ್ನು ಸ್ವಾನಪಡಿಸಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಮಾತ್ರ ನಮ್ಮ ವಿರೋಧವಿದೆ. ಈ ಬಗ್ಗೆ ಸರ್ಕಾರ ಮರು ಪರಿಶೀಲನೆ ಮಾಡಬೇಕೆಂದು ಹಸಿರು ಸೇನೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಒತ್ತಾಯಿಸಿದರು.

ತಾಲ್ಲೂಕಿನ ಜಂಗಮಕೋಟೆಯಲ್ಲಿನ ಜಂಗಮಕೋಟೆ ರೇಷ್ಮೆ ಬೆಳೆಗಾರರ ರೈತ ಉತ್ಪಾದಕರ ಕಂಪನಿಯ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ದಿಯಲ್ಲಿ ಕೃಷಿಯಂತೆಯೆ ಕೈಗಾರಿಕೆಗಳು ಸಹ ಬಹಳ ಪ್ರಮುಖ ಪಾತ್ರವಹಿಸುತ್ತವೆ. ಕೈಗಾರಿಕೆಗಳ ಸ್ಥಾಪನೆ ಅಗತ್ಯವಿದೆ. ಆದರೆ ಫಲವತ್ತಾದ ಭೂಮಿಯಲ್ಲಿ ಕೈಗಾರಿಕೆಗಳ ಸ್ಥಾಪನೆ ಮಾಡಬೇಡಿ, ಬಂಜರು ಭೂಮಿ ಮತ್ತು ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಿ ಎಂದು ಮನವಿ ಮಾಡಿದರು.

ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿಯು ಸ್ವಾನಕ್ಕೆ ಮುಂದಾಗಿರುವ ಬಹುತೇಕ ಎಲ್ಲ ಭೂಮಿಯೂ ಫಲವತ್ತಾದ ಭೂಮಿಯಾಗಿದ್ದು ಸರ್ಕಾರವು ಈ ಜಮೀನಿನ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಟು ಬೇರೆ ಕಡೆ ಜಾಗ ನೋಡಲಿ ಎಂದು ಕೋರಿದರು.

ಸಹಕಾರ ಸಂಘಗಳು ರೈತರ ಹಾಗೂ ಕೃಷಿಯ ಜೀವಾಳ, ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಎಂದಿಗೂ ನುಸುಳದಂತೆ ನೋಡಿಕೊಳ್ಳಬೇಕು, ನಾವು ಸಹಕಾರ ರಂಗವನ್ನು ಉಳಿಸಿದರೆ ಸಹಕಾರ ರಂಗವು ನಮ್ಮೆಲ್ಲಾ ರೈತರನ್ನು ಉಳಿಸುತ್ತದೆ ಬೆಳೆಸುತ್ತದೆ ಎಂದರು.

ರೈತ ಉತ್ಪಾದಕ ಕಂಪನಿಯು ರೈತರನ್ನು ಸಂಘಟಿಸುತ್ತಿದೆ. ಹತ್ತು ಹಲವು ಉಪಯೋಗಗಳಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ರೈತರಲ್ಲಿ ಮನವಿ ಮಾಡಿದರು.

ಜಂಗಮಕೋಟೆ ರೇಷ್ಮೆ ಬೆಳೆಗಾರರ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಭಕ್ತರಹಳ್ಳಿ ಚಿದಾನಂದಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂಪನಿಯಿಂದ ರೈತರಿಗೆ ಅಗತ್ಯವಿರುವ ಕೃಷಿ, ರೇಷ್ಮೆ ಕೃಷಿ, ತೋಟಗಾರಿಕೆ ಕೃಷಿಯ ಪರಿಕರಗಳನ್ನು ಮಾರುಕಟ್ಟೆಗಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಲಾಭಗಳಿಸುವ ಉದ್ದೇಶವಿಲ್ಲ. ಬದಲಿಗೆ ರೈತರಿಗೆ ಅನುಕೂಲ ಮಾಡಿಕೊಡುವುದೆ ಕಂಪನಿಯ ಉದ್ದೇಶ. ಹೆಚ್ಚಿನ ರೈತರು ಕಂಪನಿಯಲ್ಲಿ ಶೇರುಗಳನ್ನು ಕಟ್ಟಿ, ಇಲ್ಲಿಯೆ ಹೆಚ್ಚು ಕೃಷಿ ಪರಿಕರಗಳು, ರಸಗೊಬ್ಬರಗಳನ್ನು ಖರೀಸುವ ಮೂಲಕ ಕಂಪನಿಯನ್ನು ಆರ್ಥಿಕವಾಗಿ ಸದೃಡಗೊಳಿಸುವಂತೆ ಮನವಿ ಮಾಡಿದರು.

ಕಂಪನಿಯ ಮುಖ್ಯ ಕಾರ್ಯನಿರ್ವಹಣಾಕಾರಿ ಬಿ.ಆರ್.ಸುರೇಶ್ ಅವರು ವಾರ್ಷಿಕ ಆಯ ವ್ಯಯದ ಲೆಕ್ಕ ಮಂಡಿಸಿ ಸಭೆಯಲ್ಲಿ ಅನುಮೋದನೆ ಪಡೆದುಕೊಂಡರು.

ಕಂಪನಿಯಲ್ಲಿ ಹೆಚ್ಚು ಪರಿಕರಗಳನ್ನು ಖರೀದಿಸಿ ವಹಿವಾಟು ನಡೆಸಿದ ಕಾಕಚೊಕ್ಕಂಡಹಳ್ಳಿಯ ರೈತ ಶ್ರೀನಿವಾಸ್‌ ಅವರನ್ನು ಸನ್ಮಾನಿಸಲಾಯಿತು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ತಮ್ಮಣ್ಣ, ನಿರ್ದೇಶಕರಾದ ಎಚ್.ಎಂ.ಮಂಜುನಾಥಗೌಡ, ಎಸ್.ಜಿ.ನಾರಾಯಣಸ್ವಾಮಿ, ಜಯರಾಂ, ಕೆ.ಕುಮಾರ್, ಸರಿತಾಗಂಗಾಧರ್, ಮುರಳೀಧರ್, ಜಿ.ಸಿ.ಪ್ರಕಾಶ್, ಮುನಿರಾಜು, ಪ್ರಗತಿಪರ ರೈತರಾದ ಮುನಿರೆಡ್ಡಿ, ರಾಮಚಂದ್ರ, ದೇವರಾಜ್, ಲಕ್ಷ್ಮೀನಾರಾಯಣ್, ಸಿಬ್ಬಂದಿ ಸುರೇಶ್, ಸಂಧ್ಯ ಹಾಜರಿದ್ದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version